ಕರ್ನಾಟಕ

karnataka

ETV Bharat / state

ಕೊರವ, ಕೊರಚರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡದಿರಲು ಆಗ್ರಹಿಸಿ ಪತ್ರ ಚಳುವಳಿ

ಪರಿಶಿಷ್ಟ ಜಾತಿ ಪಟ್ಟಿಯಿಂದ ಕೊರವ, ಕೊರಚ, ಲಂಬಾಣಿ, ಭೋವಿ ವಡ್ಡರ ಸೇರಿದಂತೆ ಕೆಲ ಜಾತಿಗಳನ್ನು ತೆಗೆಯುವ ವಿಚಾರವು ಇದೀಗ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ವರ್ಗಾವಣೆಯಾಗಿದೆ.

letter
letter

By

Published : Jun 6, 2020, 12:07 PM IST

ಲಿಂಗಸುಗೂರು (ರಾಯಚೂರು):ಕೊರವ, ಕೊರಚರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈ ಬಿಡದಿರಲು ಆಗ್ರಹಿಸಿ ರಾಯಚೂರು ಜಿಲ್ಲೆಯ ಲಿಂಗಸುಗೂರಲ್ಲಿ ಕೊರವ ಸಮಾಜದ ಮುಖಂಡರು ಪತ್ರ ಚಳುವಳಿ ಮೂಲಕ ಸರ್ಕಾರದ ಗಮನ ಸೆಳೆದರು.

ಪರಿಶಿಷ್ಟ ಜಾತಿ ಪಟ್ಟಿಯಿಂದ ಕೊರವ, ಕೊರಚ, ಲಂಬಾಣಿ, ಭೋವಿ ವಡ್ಡರ ಸೇರಿದಂತೆ ಕೆಲ ಜಾತಿಗಳನ್ನು ತೆಗೆಸಲು ಕೆಲವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೋರ್ಟ್ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಪ್ರಕರಣವನ್ನು ವರ್ಗಾಯಿಸಿದೆ.

ಪತ್ರ ಚಳುವಳಿ

ಈ ಕುರಿತಾಗಿ ಆಯೋಗ ಎಲ್ಲಾ ರಾಜ್ಯ ಸರ್ಕಾರಗಳಿಂದ ಸ್ಪಷ್ಟನೆ ಕೇಳಿದ್ದರಿಂದ ಸಿಎಂ ಯಡಿಯೂರಪ್ಪ ತಮ್ಮನ್ನು ಬೆಂಬಲಿಸುವಂತೆ ಕೊರವ ಸಮಾಜ ಹೋರಾಟ ನಡೆಸುತ್ತಿದೆ.

ಲಾಕ್‌ ಡೌನ್‌ ಇರುವುದರಿಂದ ಆರಂಭಿಕ ಹಂತವಾಗಿ ಪತ್ರ ಚಳುವಳಿ ಆರಂಭಗೊಂಡಿದೆ. ಕೊರವ ಸಮುದಾಯದ ರಾಯಚೂರು ಜಿಲ್ಲಾ ಅಧ್ಯಕ್ಷ ಮರಿಯಪ್ಪ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ನಮ್ಮವರ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಇಲ್ಲದೇ ಹೋದಲ್ಲಿ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂಬ ಎಚ್ಚರಿಸಿದ್ದಾರೆ.

ABOUT THE AUTHOR

...view details