ರಾಯಚೂರು:ನಗರದ ಪಶ್ಚಿಮ ಠಾಣೆಯ ಪಿಎಸ್‌ಐ ನನಗೆ ಬೇಡಿ ಹಾಕಿ, ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ ಎಂದು ವಕೀಲ ವೀರಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವೀರಯ್ಯ, ನಾನು ರೈಲ್ವೆ ಸ್ಟೇಷನ್ ಸರ್ಕಲ್ ಬಳಿಯ ಹೋಟೆಲ್ಗೆ ತೆರಳಿದಾಗ, ಪಿಎಸ್‌ಐ ನಾಗರಾಜ ಮೆಕ್ಕಾರವರ ಜೀಪ್‌ನ ಡ್ರೈವರ್ ಪರಿಚಯ ವ್ಯಕ್ತಿಯಾಗಿದ್ದ. ಆತನನ್ನು ಮಾತನಾಡಿಸಲು ಹೋದಾಗ ಹೊಡೆದು ಠಾಣೆಗೆ ಕರೆದುಕೊಂಡು ಹೋಗಿ ಕರೆಂಟ್ ಶಾಕ್ ನೀಡಿ ಬೇಡಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಆಗ ಅಲ್ಲಿಯೇ ಇದ್ದ ನನ್ನ ಸ್ನೇಹಿತನ ಸಹಾಯದಿಂದ ನ್ಯಾಯವಾದಿಗಳಿಗೆ ತಿಳಿಸಿದಾಗ ಅವರು ಅಲ್ಲಿಂದ ನನ್ನನ್ನು ಕರೆದುಕೊಂಡು ಬಂದಿದ್ದಾರೆ. ಕಾರಣ ಇಲ್ಲದೆ ನನ್ನನ್ನು ಹೊಡೆದಿರುವ ಪಿಎಸ್‌ಐ ಅವರನ್ನು ಅಮಾನತು ಮಾಡಬೇಕೆಂದು ವೀರಯ್ಯ ಒತ್ತಾಯಿಸಿದ್ದಾರೆ.