ಕರ್ನಾಟಕ

karnataka

ETV Bharat / state

ನರೇಗಾ ಕಾಮಗಾರಿ: ಹೃದಯಾಘಾತದಿಂದ ಕಾರ್ಮಿಕ ಸಾವು

ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಬಿಸಿಲು ಹೆಚ್ಚಾಗಿದ್ದು ಕೆಲಸ ಮಾಡುವಾಗ ನೀರಿನ ವ್ಯವಸ್ಥೆ ಮಾಡಿರಲಿಲ್ಲ ಎಂಬ ಆರೋಪವಿದ್ದು, ಬಿಸಿಲಿನ ತಾಪಮಾನದಿಂದ ಬಳಲಿ ಸಾವನ್ನಪಿದ್ದಾರೆಂದು ಹೇಳಲಾಗುತ್ತಿದೆ.

By

Published : Mar 16, 2019, 11:44 AM IST

ಕಾರ್ಮಿಕ ಸಾವು

ರಾಯಚೂರು: ತಾಲೂಕಿನ ಗುಣದಾಳ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತ ಕಾರ್ಮಿಕನನ್ನು ದಾವಿದಪ್ಪ (55) ಎಂದು ಗುರುತಿಸಲಾಗಿದೆ. ಈತ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಕೆಲಸದ ಸಮಯದಲ್ಲಿ ಏಕಾಏಕಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.

ಇತ್ತಬಿಸಿಲು ಹೆಚ್ಚಾಗಿದ್ದು ಕೆಲಸ ಮಾಡುವಾಗ ನೀರಿನ ವ್ಯವಸ್ಥೆ ಮಾಡಿರಲಿಲ್ಲ ಎಂಬ ಆರೋಪವಿದ್ದು, ಬಿಸಿಲಿನ ತಾಪಮಾನದಿಂದ ಬಳಲಿ ಸಾವನ್ನಪಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಕೆಲಸಕ್ಕೆಂದು ಮನೆಯಿಂದ ಹೋದ ದಾವಿದಪ್ಪ ಸಾವಿಗೀಡಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ABOUT THE AUTHOR

...view details