ರಾಯಚೂರು:ಮೇಲ್ಛಾವಣಿಯ ಭಾಗವೊಂದು ಕುಸಿದು ಬಿದ್ದು ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿರವಾರ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮೇಲ್ಛಾವಣಿ ಕುಸಿತ.. ಯುವಕನಿಗೆ ಗಾಯ - KSRTC bus stand
ಬಸ್ ನಿಲ್ದಾಣದ ಮೇಲ್ಛಾವಣಿ ಕುಸಿದು ಬಿದ್ದು ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಮೇಲ್ಛಾವಣಿ ಕುಸಿತ
ರತನ್ ಚೌಹಾಣ್ ಗಾಯಗೊಂಡಿರುವ ಯುವಕನೆಂದು ಗುರುತಿಸಲಾಗಿದೆ. ನಿಲ್ದಾಣದಲ್ಲಿ ಬಸ್‌ಗಾಗಿ ಕಾಯ್ದುಕೊಂಡು ಯುವಕ ಕುಳಿತಿದ್ದ. ಈ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಬಸ್ ನಿಲ್ದಾಣದ ಮೇಲ್ಛಾವಣಿಯ ಭಾಗವೊಂದು ಕುಸಿದು ಯುವಕನ ಮೇಲೆ ಬಿದ್ದಿದೆ.
ಇದರಿಂದ ಯುವಕ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಥಿಲಗೊಂಡಿರುವ ಬಸ್ ನಿಲ್ದಾಣ ರಿಪೇರಿ ಮಾಡದೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದೇ ಅವಘಡಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.