ಕರ್ನಾಟಕ

karnataka

ETV Bharat / state

ಇದೇನು ದನದ ಕೊಟ್ಟಿಗೆಯೋ, ಸ.ಕಿ.ಪ್ರಾ. ಶಾಲೆಯೋ? - kannada news

ಅದು ಸುಮಾರು 24 ವರ್ಷದ ಹಳೆಯ ಸರ್ಕಾರಿ ಶಾಲೆ. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಅದ್ರೆ ಸದ್ಯ ಪ್ರಾರ್ಥನೆ ಸಲ್ಲಿಸಲೂ ಸಹ ಸ್ಥಳವಿಲ್ಲದೆ, ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿ ಮನೆಯ ಕೊಠಡಿಯಂತಾಗಿದೆ ಶಾಲೆಯ ಪರಿಸ್ಥಿತಿ.

ಜಲಾಲ್ ನಗರದ ಸರ್ಕಾರಿ ಶಾಲೆಯ ಪರಿಸ್ಥಿತಿ

By

Published : May 18, 2019, 8:02 PM IST

ರಾಯಚೂರು: ಅದು ಸುಮಾರು 24 ವರ್ಷದ ಹಳೆಯ ಸರ್ಕಾರಿ ಶಾಲೆ. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಅದ್ರೆ ಸದ್ಯ ಪ್ರಾರ್ಥನೆ ಸಲ್ಲಿಸಲೂ ಸಹ ಸ್ಥಳವಿಲ್ಲದೆ, ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿ ಮನೆಯ ಕೊಠಡಿಯಂತಾಗಿದೆ ಶಾಲೆಯ ಪರಿಸ್ಥಿತಿ.

ಜಲಾಲ್ ನಗರದ ಸುಮಾರು 24 ವರ್ಷದ ಹಿಂದಿನ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಸದ್ಯ ಶಾಲೆ ಅಳಿವಿನಂಚಿಗೆ ತಲುಪಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನೀಡಬೇಕಿದ್ದ ಶಿಕ್ಷಣ ಇಲಾಖೆ, ದನಕ ಕೊಟ್ಟಿಗೆ ಹಾಗೂ ಅಡುಗೆ ಮನೆಯ ಮಧ್ಯೆ ಕಲಿಯುವ ಸ್ಥಿತಿಗೆ ತಂದಿದೆ. ಸದ್ಯ ಶಾಲೆಯಲ್ಲಿ ಒಟ್ಟು 54 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಜಲಾಲ್ ನಗರದ ಸರ್ಕಾರಿ ಶಾಲೆಯ ಪರಿಸ್ಥಿತಿ

ವಿಪರ್ಯಾಸ ಎಂದ್ರೆ ವಿದ್ಯಾರ್ಥಿಗಳಿಗೆ ಸುಸಜ್ಜಿತ ಪಾಠ ಶಾಲೆ, ಆಟದ ಗ್ರೌಂಡ್ ಮತ್ತು ಕಂಪೌಂಡ್ ಶಿಕ್ಷಣ ಇಲಾಖೆ ನಿರ್ಮಿಸಬೇಕಿತ್ತು. ಅದ್ರೆ ಇದ್ಯಾವುದನ್ನೂ ಮಾಡಿಲ್ಲ. ಶಾಲೆಯ ಪಕ್ಕದಲ್ಲಿ ದನ, ಆಡುಗಳ ಕೊಟ್ಟಿಗೆ, ಶಾಲೆಯ ಮುಂದೆ ರಸ್ತೆ ಇವೆ. ಕನಿಷ್ಠ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಮಾಡಲೂ ಸಹ ಜಾಗವಿಲ್ಲದೆ ಶಾಲೆಯ ಕೊಠಡಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಪರಿಸ್ಥಿತಿ ಒದಗಿಬಂದಿದೆ.

ಶಾಲೆಯ ದುಸ್ಥಿಯ ಬಗ್ಗೆ ಹಲವಾರು ಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗೆಳಿಗೆ ಮನವಿ ಸಲ್ಲಿಸಲಾಗಿದೆ. ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಾಲೆಯ ಸ್ಥಳದ ದಾಖಲೆ ಪತ್ರಗಳೇ ಇಲ್ಲ ಎನ್ನುವ ಸಂತ್ಯಾಶ ಹೊರಬಿದ್ದಿದೆ. ಮೊದಲು ಪತ್ರಗಳು ಆಗಲಿ ಎಂದು ಅದನ್ನು ಸರಿಪಡಿಸಲು ಮುಂದಾದರೂ ಸ್ಥಳೀಯ ನಿವಾಸಿಗಳು ಸಹಕಾರ ನೀಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಇದು ಸರ್ಕಾರಿ ಶಾಲೆಯೋ ಅಥವಾ ದನಕ ಕೊಟ್ಟಿಗೆಯೋ ಎನ್ನುವಂತಹ ಪರಿಸ್ಥಿತಿ ಈ ಸ.ಕಿ.ಪ್ರಾ. ಶಾಲೆಯದು.

ABOUT THE AUTHOR

...view details