ರಾಯಚೂರು :ಕೋವಿಡ್ ನಿಯಂತ್ರಣಕ್ಕೆ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದ್ದು, ಮದ್ಯ ಮಾರಾಟ ನಿಷೇಧಿಸಲಾಗಿದೆ. ಆದ್ರೆ, ನಗರದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ.
ನಗರದ ಗಂಜ್ ಸರ್ಕಲ್ ಬಳಿ ಮಹಿಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದ್ದು, ಎಪಿಎಂಸಿಯನ್ನೇ ಮದ್ಯಪ್ರಿಯರು ಅಡ್ಡವನ್ನಾಗಿ ಮಾಡಿಕೊಂಡಿದ್ದಾರೆ. ಮದ್ಯ ಸೇವನೆ ಮಾಡುತ್ತಿರುವ ವಿಷಯದ ಕುರಿತು ಸುದ್ದಿ ಮಾಡಲು ಮಾಧ್ಯಮದವರು ತೆರಳಿದಾಗ, ಮದ್ಯ ಪ್ರಿಯರು ಕ್ಯಾಮೆರಾ ಕಂಡು ಓಡಿ ಹೋಗಿದ್ದಾರೆ. ಎದ್ನೋ ಬಿದ್ನೋ ಎಂದು ಮದ್ಯವನ್ನು ಕೈಯಲ್ಲಿ ಹಿಡಿದು ಓಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.