ಕರ್ನಾಟಕ

karnataka

ETV Bharat / state

ಮದ್ಯ ನಿಷೇಧಕ್ಕೆ ಹಿಂದೇಟು: ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ ಮಹಿಳೆ - ಮತದಾನ ಬಹಿಷ್ಕಾರ

ಮದ್ಯ ನಿಷೇಧ ಮಾಡದಿದ್ದರೆ ಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಮಿತಿಯ ಸಂಚಾಲಕಿ ವಿದ್ಯಾ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಮದ್ಯ ನಿಷೇಧ ಮಾಡದಿದ್ದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಜಿಲ್ಲೆಯ ಜನರ ಎಚ್ಚರಿಕೆ

By

Published : Mar 19, 2019, 8:48 PM IST

ರಾಯಚೂರು: ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಹಲವು ಬಾರಿ ಒತ್ತಾಯಿಸಿದ್ದರೂ ಆಳುವ ಸರ್ಕಾರಗಳು ಮಾತ್ರ ತೆಲೆಕೆಡಿಸಿಕೊಂಡಿಲ್ಲ. ಈ ಧೋರಣೆ ಖಂಡಿಸಿ ಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಮದ್ಯ ನಿಷೇಧ ಆಂದೋಲನ ಕರ್ನಾಟಕ ಸಮಿತಿಯ ಸಂಚಾಲಕಿ ವಿದ್ಯಾ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಮದ್ಯ ನಿಷೇಧ ಮಾಡದಿದ್ದರೆ ಮತದಾನ ಬಹಿಷ್ಕಾರ ಮಾಡುವುದಾಗಿ ಜಿಲ್ಲೆಯ ಜನರ ಎಚ್ಚರಿಕೆ

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆ ಸೇರಿದಂತೆ ರಾಜ್ಯ ಸರ್ಕಾರ ತನ್ನ ಖಜಾನೆ ತುಂಬಿಕೊಳ್ಳಲು ಮದ್ಯ ಮಾರಾಟ ನಿಷೇಧ ಮಾಡದೇ ಎಗ್ಗಿಲ್ಲದೆ ಮಾರಾಟ ಮಾಡುತ್ತಿದೆ. ಇದರಿಂದ ಯುವಕರು, ವಯೊವೃದ್ಧರಾದಿಯಾಗಿ ಕುಡಿತಕ್ಕೆ ದಾಸರಾಗಿದ್ದಾರೆ. ಹಗಲು ರಾತ್ರಿ ಎನ್ನದೇ ಕುಡಿದು ಹೆಣ್ಣು ಮಕ್ಕಳಿಗೆ, ಪತ್ನಿಯರ ಮೇಲೆ ಮಾನಸಿಕ, ದೈಹಿಕವಾಗಿ ದೌರ್ಜನ್ಯ ಎಗುತ್ತಿದ್ದಾರೆ. ಇದರಿಂದ ಹಲವು ಕುಟುಂಬಗಳು ಬೀದಿ ಪಾಲಾಗಿವೆ.

ಸಿಎಂ ಕುಮಾರಸ್ವಾಮಿ ಅವರು ಚುನಾವಣೆಯ ಮುಂಚೆ ಮದ್ಯ ನಿಷೇಧಿಸುವುದಾಗಿ ಹೇಳಿದ್ದರು. ಅಧಿಕಾರಕ್ಕೆ ಬಂದ ಬಳಿಕ ಈಗ ಇದರ ಬಗ್ಗೆ ಮಾತನಾಡುತ್ತಿಲ್ಲ. ಇದೊಂದು ಪಾಠವಾಗಬೇಕು. ಹಾಗಾಗಿ ಬರುವ ಚುನಾವಣೆಯಲ್ಲಿ ನಾವೆಲ್ಲ ಸೇರಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ವಿದ್ಯಾ ಪಾಟೀಲ್​ ಹೇಳಿದ್ದಾರೆ.

ABOUT THE AUTHOR

...view details