ರಾಯಚೂರು:ಕಾಂಗ್ರೆಸ್ ಮುಖಂಡ ಡಿಕೆಶಿ ಅವರ ಮನೆಯ ಮೇಲೆ ಸಿಬಿಐ ದಾಳಿ ಹಿಂದೆ ಯಾವುದೇ ರೀತಿಯ ರಾಜಕೀಯವಿಲ್ಲ, ಅವರು ಸೀತೆಯಷ್ಟೇ ಪವಿತ್ರರಾಗಿದ್ದರೆ ತನಿಖೆ ಎದುರಿಸಲಿ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಿಂದೆ ಡಿಕೆಶಿ ಅವರ ಮನೆಯ ಮೇಲೆ ದಾಳಿಯಾದ ಸಂದರ್ಭದಲ್ಲಿ ಅನೇಕ ದಾಖಲೆಗಳು, ಹವಾಲ ಹಣ ಸಿಕ್ಕಿದ್ದು, ಅಲ್ಲದೇ ಜೈಲಿಗೆ ಹೋಗಿ ಬಂದಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ಮೇಲು ದಾಳಿ ಆಯಿತು ಜೈಲಿಗೆ ಹೋಗಿ ನಿರಪರಾಧಿ ಎಂದು ಸಾಬೀತಾಗಿದೆ. ಬಿಜೆಪಿಯವರ ಮನೆ ಮೇಲೆ ದಾಳಿ ನಡೆದರೆ ರಾಜಕಾರಣವಲ್ಲ, ಅದೇ ದಾಳಿ ಅವರ ಮೇಲೆ ನಡೆದರೆ ರಾಜಕಾರಣ ಎನ್ನುವುದು ಎಷ್ಟು ಸರಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಡಿಕೆಶಿ ಸೀತೆಯಷ್ಟೇ ಪವಿತ್ರರಾಗಿದ್ದರೆ ತನಿಖೆ ಎದುರಿಸಲಿ ಎಂದರು.