ಕರ್ನಾಟಕ

karnataka

ETV Bharat / state

ಯತ್ನಾಳ್ ಬಗ್ಗೆ ಮಾತನಾಡಿದರೆ ನಾನು ಹುಚ್ಚನಾಗುತ್ತೇನೆ: ರೇಣುಕಾಚಾರ್ಯ - ಕರ್ನಾಟಕ ಉಪ ಚುನಾವಣೆ

ನಾನು ಮಸ್ಕಿ ಬೈ ಎಲೆಕ್ಷನ್ ಪ್ರಚಾರಕ್ಕೆ ಬಂದಿದ್ದೇನೆ. ಹೀಗಾಗಿ ಯತ್ನಾಳರ ಬಗ್ಗೆ ಮಾತನಾಡಿದರೆ ನಾನು ಹುಚ್ಚು ಆಗುತ್ತೇನೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

mp-renukacharya
mp-renukacharya

By

Published : Apr 7, 2021, 5:00 PM IST

ರಾಯಚೂರು: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಮಾತನಾಡಿದರೆ ನಾನು ಹುಚ್ಚನಾಗುತ್ತೇನೆ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಜಿಲ್ಲೆಯ ಮಸ್ಕಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ನಾನು ಮಸ್ಕಿ ಬೈ ಎಲೆಕ್ಷನ್ ಪ್ರಚಾರಕ್ಕೆ ಬಂದಿದ್ದೇನೆ. ಹೀಗಾಗಿ ಯತ್ನಾಳರ ಬಗ್ಗೆ ಮಾತನಾಡಿದರೆ ನಾನು ಹುಚ್ಚು ಆಗುತ್ತೇನೆ ಎಂದರು.

ಎಂ.ಪಿ.ರೇಣುಕಾಚಾರ್ಯ, ಶಾಸಕ

ಪ್ರತಾಪ್​ಗೌಡ ಪಾಟೀಲ್ ಮಾರಾಟವಾಗುವ ವ್ಯಕ್ತಿಯಲ್ಲ. ಸ್ವಾಭಿಮಾನಕ್ಕೆ ಧಕ್ಕೆಯಾಗಿ ಕಾಂಗ್ರೆಸ್ ಬಿಟ್ಟು ಬಂದಿದ್ದರೆ. ಸಿದ್ದರಾಮಯ್ಯನವರೇ ನಿಮ್ಮ ಆಪ್ತರೇ ಕಾಂಗ್ರೆಸ್ ತೊರೆದು ಬಂದಿದ್ದಾರೆ. ಸರ್ಕಾರದಲ್ಲಿ ಬಿ.ವೈ.ವಿಜಯೇಂದ್ರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಅವರು ನಮ್ಮ ಪಕ್ಷದ ಉಪಾಧ್ಯಕ್ಷರಾಗಿದ್ದು, ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದ್ರೆ ನಿಮ್ಮ ಭಾಷಣ ಜನ ಒಪ್ಪೋದಿಲ್ಲ ಎಂದರು.

ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಬಿಜೆಪಿ ನಿಶ್ಚಿತವಾಗಿ ಜಯಭೇರಿ ಬಾರಿಸುತ್ತದೆ. ಸಿದ್ದರಾಮಯ್ಯನವರೇ ನೀವೇನೇ ಅಪಪ್ರಚಾರ ಮಾಡಿದರೂ ಬಿಜೆಪಿ ಗೆಲ್ಲುತ್ತದೆ. ಕಾಂಗ್ರೆಸ್ ರಾಜ್ಯ ಮತ್ತು ದೇಶದಲ್ಲೆಲ್ಲೂ ಅಧಿಕಾರಕ್ಕೆ ಬರಲ್ಲ ಎಂದರು.

ಸಂಘ ಪರಿವಾರ ಕತ್ತರಿಸುವ ಕೆಲಸ ಮಾಡಲ್ಲ, ಬದಲಾಗಿ ಜೋಡಣೆ ಮಾಡುತ್ತೆ. ಸಿದ್ದರಾಮಯ್ಯಗೆ ಆರ್​​ಎಸ್​​​ಎಸ್ ಬಗ್ಗೆ ಮಾತಾನಡುವ ನೈತಿಕ‌ ಹಕ್ಕಿಲ್ಲ. ಸಿದ್ದರಾಮಯ್ಯ ಆರ್​ಎಸ್​​​ಎಸ್ ವಿರೋಧಿಯಾಗಿದ್ದು, ಕಾಂಗ್ರೆಸ್​ನಲ್ಲಿ ನಾಯಕತ್ವದ ಕೊರತೆ ಇದೆ ಎಂದರು.

ABOUT THE AUTHOR

...view details