ರಾಯಚೂರು:ಹೆಮ್ಮಾರಿ ಕೊರೊನಾ ಸೋಂಕಿನ ಭೀತಿಯಿಂದ ಈಗಾಗಲೇ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆ ಮತ್ತೊಮ್ಮೆ ಜನರನ್ನು ಆತಂಕಕ್ಕೆ ದೂಡಿದೆ. ಅಲ್ಲದೇ ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಅಪಾರ ನಷ್ಟ ತಂದೊಡ್ಡಿದೆ.
ರಾಯಚೂರಿನಲ್ಲಿ ಭಾರಿ ಮಳೆಯಿಂದ ಆದ ನಷ್ಟವೆಷ್ಟು ಗೊತ್ತೇ.? - rainfall news
ಸೆಪ್ಟೆಂಬರ್ ತಿಂಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೋಟ್ಯಂತರ ರೂ. ಹಾನಿ ಸಂಭವಿಸಿದೆ. ಮನೆಗಳು, ಮನೆಯ ಛಾವಣಿಗಳು, ಜಾನುವಾರುಗಳು, ತೋಟಗಾರಿಕೆ, ಬೆಳೆಗಳು, ರಸ್ತೆಗಳು, ಸೇತುವೆಗಳಿಗೆ ಹಾನಿ ಸಂಭವಿಸಿದೆ. ಜತೆಗೆ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿ ಗೃಹಪಯೋಪಗಿ ಸಾಮಗ್ರಿಗಳು, ದವಸ ಧಾನ್ಯಗಳು ನೀರು ಪಾಲಾಗಿ ವಾಸಿಸಲು ನೆಲಯಿಲ್ಲದಂತಾಗಿದೆ.
ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ 79.49 ಕೋಟಿ ರೂ. ನಷ್ಟವಾಗಿದೆ. ಇದರಿಂದ ಚೇತರಿಸಿಕೊಳ್ಳುವ ಮುನ್ನವೇ ಸೆಪ್ಟೆಂಬರ್ ತಿಂಗಳನಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕೋಟ್ಯಂತರ ರೂ. ಹಾನಿ ಸಂಭವಿಸಿದೆ. ಮನೆಗಳು, ಮನೆಯ ಛಾವಣಿಗಳು, ಜಾನುವಾರುಗಳು, ತೋಟಗಾರಿಕೆ, ಬೆಳೆಗಳು, ರಸ್ತೆಗಳು, ಸೇತುವೆಗಳಿಗೆ ಹಾನಿ ಸಂಭವಿಸಿದೆ. ಜತೆಗೆ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿ ಗೃಹಪಯೋಪಗಿ ಸಾಮಗ್ರಿಗಳು, ಧವಸ ಧನ್ಯಗಳು ನೀರು ಪಾಲಾಗಿ ವಾಸಿಸಲು ನೆಲಯಿಲ್ಲದಂತಾಗಿದೆ. ಇನ್ನು 2020 ಅಕ್ಟೋಬರ್ 1ರವರೆಗೆ ಸರಿಸುಮಾರು 78.73 ಕೋಟಿ ರೂ.ನಷ್ಟು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮಳೆಯಿಂದಾಗಿ ರೈತರು ಬೆಳೆದಿದ್ದ ಹತ್ತಿ, ತೊಗರಿ, ಸಜ್ಜೆ ಹಾಗೂ ತೋಟಗಾರಿಕೆ ಬೆಳೆಗಳು ಒಳಗೊಂಡಂತೆ ಒಟ್ಟು 22,674 ಹೆಕ್ಟರ್ ಬೆಳೆ ಹಾನಿಯಾಗಿದೆ. ಅಂದಾಜು ಎನ್ಡಿಆರ್ಎಫ್ ನಿಯಮಗಳ ಪ್ರಕಾರ 18 ಕೋಟಿ ರೂ. ಹಾನಿ ಸಂಭವಿಸಿದೆ. 3,025 ಮನೆಗಳಿಗೆ ಹಾನಿಯಾಗಿದೆ. ರಾಜ್ಯ ಹೆದ್ದಾರಿ 378 ಕಿ.ಮೀ., ಗ್ರಾಮೀಣ ಭಾಗದಲ್ಲಿ 1,648 ಕಿ.ಮೀ., ನಗರ ಪ್ರದೇಶದಲ್ಲಿ 278 ಕಿ.ಮೀ. 62 ಸೇತುವೆಗಳಿಗೆ ಹಾನಿಯಾಗಿದೆ. ಇದೀಗ ಮತ್ತೆ ಮಳೆ ಸುರಿಯುತ್ತಿರುವುದರಿಂದ ಮತ್ತೊಮ್ಮೆ ಬೆಳೆ ಹಾನಿ ಸರ್ವೇ ಕಾರ್ಯ ನಡೆಯುತ್ತಿದೆ.