ರಾಯಚೂರು:ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು, ತಂಪಿನ ವಾತಾವರಣ ನಿರ್ಮಾಣವಾಗಿದೆ. ಬಿರು ಬಿಸಿಲಿನಿಂದ ಕೂಡಿದ್ದ ಜಿಲ್ಲೆ ಈಗ ಕೂಲ್ ಕೂಲ್ ಆಗಿ ಮಾರ್ಪಟ್ಟಿದೆ.
ರಾಯಚೂರು ಜಿಲ್ಲೆಯಲ್ಲಿ ಮುಂದುವರೆದ ಮಳೆ: ರೈತರ ಮೊಗದಲ್ಲಿ ಹೆಚ್ಚಿದ ಸಂತಸ - rain effect in district
ಜಿಲ್ಲೆಯಲ್ಲಿ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು, ತಂಪಿನ ವಾತಾವರಣ ನಿರ್ಮಾಣವಾಗಿದೆ. ಬಿರು ಬಿಸಿಲಿನಿಂದ ಕೂಡಿದ್ದ ಜಿಲ್ಲೆ ಈಗ ಕೂಲ್ ಕೂಲ್ ಆಗಿದೆ.
Raichur district
ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತೆಗೊಂಡಿದೆ. ರಸ್ತೆಯ ಮೇಲಿನ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನು ಸುರಿಯುತ್ತಿರುವ ಮಳೆಯಿಂದಾಗಿ ರೈತಾಪಿ ವರ್ಗದಲ್ಲಿ ಸಂತಸ ಮನೆ ಮಾಡಿದ್ದು, ಕೃಷಿ ಚಟುವಟಿಕೆ ಅಲಲ್ಲಿ ಚುರುಕುಗೊಂಡಿದೆ.
ಸದ್ಯ ಕಳೆದ ಎರಡು ದಿನಗಳಲ್ಲಿ 35.3 ಮಿ.ಮೀ. ಮಳೆಯಾಗಿದೆ. ಸದ್ಯ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಳೆ ಕೊರತೆ ಅಲ್ಪ ಪ್ರಮಾಣದಲ್ಲಿ ನೀಗಿಸಿದ್ದು, ಇದೀಗ ಸುರಿಯುತ್ತಿರುವ ಮಳೆಯಿಂದ ಕೊರತೆ ತಗ್ಗುವ ನಿರೀಕ್ಷೆ ಮೂಡಿಸಿದೆ.