ರಾಯಚೂರು: ನಗರದ ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬ ಒಳಗೊಂಡು ಕಿರಾಣಿ ಅಂಗಡಿ ಸ್ಥಾಪಿಸಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತಿದ್ದು, ಕೆಇಬಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.
ರಾಯಚೂರಿನಲ್ಲಿ ಅಂಗಡಿಯೊಳಗೆ ವಿದ್ಯುತ್ ಕಂಬ! - ಕಿರಾಣಿ ಅಂಗಡಿ ಸ್ಥಾಪನೆ
ರಾಯಚೂರು ನಗರದ ಲಿಂಗಸುಗೂರು ರಸ್ತೆಯಲ್ಲಿ ವಿದ್ಯುತ್ ಕಂಬ ಒಳಗೊಂಡು ಕಿರಾಣಿ ಅಂಗಡಿ ಸ್ಥಾಪಿಸಿಕೊಂಡು ಅಪಾಯದ ಮಧ್ಯೆಯೇ ವ್ಯಾಪಾರ ನಡೆಸುತಿದ್ದರೂ ಕೆಇಬಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.
ವಿದ್ಯುತ್ ಕಂಬ ಒಳಗೊಂಡು ಚಿಕ್ಕ ಕಬ್ಬಿಣದ ಡಬ್ಬಿ ಕಿರಾಣಿ ಅಂಗಡಿ ಮಾಡಿಕೊಂಡು ಹಲವಾರು ದಿನಗಳಿಂದ ವ್ಯಾಪಾರ ನಡೆಸುತಿದ್ದಾರೆ. ಇದರಿಂದ ಅಪಾಯವಿದ್ದರೂ ಕೂಡ ಅನತಿ ದೂರದಲ್ಲಿರುವ ಕೆಇಬಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಚಿಕ್ಕ ಡಬ್ಬಿಯ ಕಿರಾಣಿ ಅಂಗಡಿಯಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಂಡು ಫ್ಯಾನ್, ಲೈಟ್ ಬಳಸಿ ವ್ಯಾಪಾರ ಮಾಡಲಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಅಂಗಡಿಯವರಿಗೆ ಕೇಳಿದರೆ ಪಕ್ಕದಲ್ಲಿ ಖಾಸಗಿ ಆಸ್ಪತ್ರೆಯ ಪಾರ್ಕಿಂಗ್ ಜಾಗ ಮತ್ತೆ ಹಿಂದೆ ಕಾಂಪ್ಲೆಕ್ಸ್ ಇದ್ದು, ಇಬ್ಬರಿಗೂ ಯಾವುದೇ ತೊಂದರೆಯಾಗದಂತೆ ಚಿಕ್ಕ ಜಾಗದಲ್ಲಿ ವ್ಯಾಪಾರ ಮಾಡುತಿದ್ದೇವೆ. ಅಪಾಯವೇನುವಿಲ್ಲ ಎನ್ನುತ್ತಿದ್ದಾರೆ.