ಕರ್ನಾಟಕ

karnataka

ವಲಸೆ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕ್ರಮ: ಶಿಕ್ಷಣ ಇಲಾಖೆ ಕಾರ್ಯಕ್ಕೆ ಶ್ಲಾಘನೆ

By

Published : Aug 20, 2020, 8:20 PM IST

ರಾಯಚೂರಿನಲ್ಲಿ 136 ವಲಸೆ ಕಾರ್ಮಿಕರ ಮಕ್ಕಳನ್ನು ವಿದ್ಯಾಗಮ ಹಾಗೂ ವಠಾರ ಯೋಜನೆಗಳ ದಾಖಲಿಸಿಕೊಳ್ಳಲಾಗಿದೆ. ಲಿಂಗಸುಗೂರಿನಲ್ಲಿ 60, ಮಾನ್ವಿಯಲ್ಲಿ 70 ವಲಸೆ ಕಾರ್ಮಿಕರು ಶಿಕ್ಷಣ ಪಡೆಯುತ್ತಿದ್ದಾರೆ.

education for migrant workers' children
ವಲಸೆ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ

ರಾಯಚೂರು: ಕೊರೊನಾ ಸೋಂಕಿನ ಭೀತಿಯಿಂದಾಗಿ ವಲಸೆ ಹೋಗಿದ್ದ ಸಾವಿರಾರು ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಮರಳಿದ್ದಾರೆ. ರಾಯಚೂರು ಜಿಲ್ಲೆಯೊಂದರಲ್ಲೇ ಸಾವಿರಾರು ಕಾರ್ಮಿಕರು ನಗರಗಳಿಗೆ ಗುಡ್​ಬೈ ಹೇಳಿದ್ದು, ಇಂಥವರ ಮಕ್ಕಳ ಶಿಕ್ಷಣಕ್ಕಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಲಾಕ್​ಡೌನ್ ಮುಗಿದು ಅನ್​ಲಾಕ್​ ಪ್ರಕ್ರಿಯೆ ಕೂಡಾ ಶುರುವಾಗಿ ತುಂಬಾ ದಿನಗಳು ಕಳೆದಿವೆ. ರಾಯಚೂರಿನಿಂದ ಹೊರ ರಾಜ್ಯಗಳಿಗೆ ವಲಸೆ ಹೋದವರೆಲ್ಲಾ ವಾಪಸ್ಸಾಗಿದ್ದಾರೆ. ಅನ್​ಲಾಕ್​ ಶುರುವಾದ ನಂತರ ಕೆಲವರು ಮತ್ತೆ ನಗರ ಪ್ರದೇಶಗಳಿಗೆ ಕುಟುಂಬ ಸಮೇತರಾಗಿ ಕೆಲಸಕ್ಕೆ ಹೊರಟಿದ್ದಾರೆ. ಇನ್ನೂ ಕೆಲವರು ನಗರ ಪ್ರದೇಶಗಳ ಸಹವಾಸ ಸಾಕು ಎಂದು ತಮ್ಮೂರುಗಳಲ್ಲೇ ಜೀವನ ಸಾಗಿಸಲು ನಿರ್ಧರಿಸಿದ್ದಾರೆ. ಮಾತ್ರವಲ್ಲದೇ ಮಕ್ಕಳನ್ನು ಶಾಲೆಗೆ ಸೇರಿಸಲು ಮುಂದಾಗಿದ್ದಾರೆ.

ಸೋಂಕಿನ ಭೀತಿಯಿಂದ ಸರ್ಕಾರ ಇನ್ನೂ ಶಾಲೆಗಳನ್ನು ಆರಂಭಿಸಿಲ್ಲ. ಈಗ ಮಕ್ಕಳು ಶಿಕ್ಷಣದಿಂದ ವಂಚಿರಾಗಬಾರದು ಎಂಬ ಕಾರಣಕ್ಕೆ ವಿದ್ಯಾಗಮ ಹಾಗೂ ವಠಾರ ಯೋಜನೆಗಳ ಮೂಲಕ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ. ರಾಯಚೂರಿನಲ್ಲಿ ಈಗಾಗಲೇ 136 ವಲಸೆ ಕಾರ್ಮಿಕರ ಮಕ್ಕಳನ್ನು ದಾಖಲಿಸಿಕೊಳ್ಳಲಾಗಿದೆ. ಲಿಂಗಸುಗೂರಿನಲ್ಲಿ 60, ಮಾನ್ವಿಯಲ್ಲಿ 70 ವಲಸೆ ಕಾರ್ಮಿಕರು ಶಿಕ್ಷಣ ಪಡೆಯುತ್ತಿದ್ದಾರೆ.

ವಲಸೆ ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸ

ಈಗಾಗಲೇ ಶಿಕ್ಷಣ ಇಲಾಖೆ ಮನೆ ಮನೆಗೆ ತೆರಳಿ ಕಾರ್ಮಿಕರ ಮಕ್ಕಳನ್ನು ವಠಾರ, ವಿದ್ಯಾಗಮ ಶಿಕ್ಷಣಕ್ಕೆ ಸೇರಿಸಿಕೊಳ್ಳಲು ಮುಂದಾಗುತ್ತಿದೆ. ಈ ವೇಳೆ ಪ್ರವೇಶ ಪಡೆಯುವ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನು ನೀಡಿ ಉತ್ತೇಜಿಸುತ್ತಿದೆ. ಕಾರ್ಮಿಕರ ಮಕ್ಕಳನ್ನೂ ಸುಕ್ಷಿತರನ್ನಾಗಿಸುವ ಶಿಕ್ಷಣ ಇಲಾಖೆಯ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details