ರಾಯಚೂರು:ಜಿಲ್ಲೆಯ ಲಿಂಗಸೂಗೂರು ತಾಲೂಕಿನ 5 ಗ್ರಾಮಗಳು, 3 ನಡುಗಡ್ಡೆ ಪ್ರದೇಶಗಳಲ್ಲಿ ವಾಸಿಸುವ ಸಾವಿರಾರು ಜನರು ಪ್ರವಾಹಕ್ಕೆ ಸಿಲುಕ್ಕಿದ್ದಾರೆ. ಶೀಲಹಳ್ಳಿ, ಯರಗೋಡಿ, ಜಲದುರ್ಗ ಸೇತುವೆಗಳು ನದಿ ನೀರಿನಿಂದ ಮುಳುಗಡೆಗೊಂಡು, ಯರಗೋಡಿ, ಜಲದುರ್ಗ, ಯಳಗೊಂದಿ, ಕರಕಲ್‌ಗಡ್ಡಿ, ಕಡದರಗಡ್ಡಿ, ಮ್ಯಾದರಗಡ್ಡಿ ಸೇರಿದಂತೆ ಐದು ಗ್ರಾಮಗಳು ಹಾಗೂ ಮೂರು ನಡುಗಡ್ಡೆ ಪ್ರದೇಶಗಳು ನೀರಿನಲ್ಲಿ ಸಿಲುಕಿದ್ದರಿಂದ ಜನರಲ್ಲಿ ಆತಂಕ ಶುರುವಾಗಿದೆ.
ನಾರಾಯಣಪುರ ಡ್ಯಾಂನಿಂದ 5.60 ಲಕ್ಷ ಕ್ಯೂಸೆಕ್ ನೀರು ಕೃಷ್ಣೆಗೆ.. ಪ್ರವಾಹಕ್ಕೆ ಸಿಲುಕಿದ ಜನರು..
ನಾರಾಯಣಪುರ ಜಲಾಶಯದಿಂದ 5.60 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿದು ಬಿಡಲಾಗಿದೆ. ಪರಿಣಾಮವಾಗಿ ಪ್ರವಾಹ ಹೆಚ್ಚಳವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
rain
ನಾರಾಯಣಪುರ ಜಲಾಶಯದಿಂದ 5.60 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನ ಕೃಷ್ಣ ನದಿಗೆ ಹರಿದು ಬಿಡಲಾಗಿದೆ. ಇದರ ಪರಿಣಾಮ ಪ್ರವಾಹ ಹೆಚ್ಚಳವಾಗಿದ್ದು, ಮತ್ತಷ್ಟು ಹೆಚ್ಚು ನೀರು ಬಂದಿದ್ದೇ ಆದ್ರೇ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.
ದೇವದುರ್ಗ ತಾಲೂಕಿನ ಹೀರೆರಾಯಕುಂಪಿ ಗ್ರಾಮಕ್ಕೆ ನೀರು ನುಗ್ಗಿದ್ದು, ಬಸ್ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ಹಿರೇರಾಯಕುಂಪಿ, ಶಾಂವತಗೇರಾ, ಹಿರೇಬೂದೂರು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೊಪ್ಪರ ಗ್ರಾಮದ ನದಿ ತೀರದಲ್ಲಿನ ದೇವಾಲಯದವರೆಗೂ ನೀರು ಬಂದಿದೆ.