ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿ ಇನ್ನೂ ನಿಂತಿಲ್ಲ ಪ್ರವಾಹ.. ಗಂಜಿ ಕೇಂದ್ರಕ್ಕೆ ಸುಮಾರು 280 ಸಂತ್ರಸ್ತರ ಸ್ಥಳಾಂತರ..

ರಾಯಚೂರು ಜಿಲ್ಲೆಯ ಹಲವು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ಹೆಚ್ಚಾಗಿದ್ದು, ಹಲವು ಗ್ರಾಮಸ್ಥರನ್ನ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಗಂಜಿ ಕೇಂದ್ರಕ್ಕೆ ಗ್ರಾಮಸ್ಥರ ಸ್ಥಳಾಂತರ

By

Published : Aug 11, 2019, 1:02 PM IST

ರಾಯಚೂರು:ನಾರಾಯಣಪುರ ಜಲಾಶಯದಿಂದ 5 ಲಕ್ಷ ಕ್ಯುಸೆಕ್​ಗಿಂತ ಹೆಚ್ಚು ನೀರು ಹರಿಬಿಟ್ಟಿರುವ ಕಾರಣ ಗುರ್ಜಾಪುರದ ಸುಮಾರು 280 ಜನರು ಹಾಗೂ ಅರಶಣಗಿ ಗ್ರಾಮದ 15ಕ್ಕೂ ಹೆಚ್ಚು ಕುಟುಂಬಗಳನ್ನು ಜೆಗರ್ಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ.

ಗಂಜಿ ಕೇಂದ್ರಕ್ಕೆ ಗ್ರಾಮಸ್ಥರ ಸ್ಥಳಾಂತರ..

ಗಂಜಿ ಕೇಂದ್ರಕ್ಕೆ ಮಹಿಳೆಯರು, ವೃದ್ಧರು, ಮಕ್ಕಳು ತಮ್ಮ ಉಟ್ಟ ಬಟ್ಟೆ ಹಾಗೂ ದವಸ ಧಾನ್ಯಗಳೊಂದಿಗೆ ಸ್ಥಳಾಂತವಾಗಿದ್ದು, ತಮ್ಮ ಮನೆಯ ನೆನಪಿನಲ್ಲಿಯೇ ಕುಳಿತು ಪರಸ್ಪರ ಚರ್ಚೆಯಲ್ಲಿ ತೊಡಗಿದ್ದು ಕಂಡು ಬಂತು.

ಇತ್ತ ದೇವದುರ್ಗ ತಾಲೂಕಿನ‌ ಅಂಜಳ ಗ್ರಾಮದ ಗ್ರಾಮಸ್ಥರಿಗೆ ಕರ್ನಾಟಕ ರಾಜ್ಯ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘ ಮತ್ತು ರಾಯಚೂರು ಜಿಲ್ಲಾ ಶಾಖೆ ವತಿಯಿಂದ ಬ್ರೆಡ್ ಪ್ಯಾಕೆಟ್‌ಗಳನ್ನ ವಿತರಿಸಲಾಯಿತು.ಮನೆ-ಮಠ ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ವಾಸವಾಗಿರುವ ಸಂತ್ರಸ್ತರಿಗೆ ದಾನಿಗಳು , ಸಂಘ-ಸಂಸ್ಥೆಗಳು ಸಹಾಯ ಹಸ್ತ ಚಾಚುತ್ತಿವೆ.

ABOUT THE AUTHOR

...view details