ರಾಯಚೂರು: ಜಿಲ್ಲೆಯಲ್ಲಿ ಬುಧವಾರ ಹೊಸದಾಗಿ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 875 ಜನರ ಗಂಟಲು ದ್ರವದ ಮಾದರಿಗಳನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಈ ಹಿಂದೆ ಪರೀಕ್ಷೆಗೆ ಕಳುಹಿಸಿದ್ದ 743 ಜನರ ಸ್ಯಾಂಪಲ್ಸ್ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯಲ್ಲಿ ಇದುವರೆಗೆ 13,411 ಜನರ ಸ್ಯಾಂಪಲ್ಸ್ ಪರೀಕ್ಷೆಗೆ ರವಾನಿಸಲಾಗಿದ್ದು, ಈ ಪೈಕಿ 8,611 ವರದಿಗಳು ನೆಗೆಟಿವ್ ಬಂದಿವೆ. ಇನ್ನುಳಿದ 4,729 ಜನರ ವರದಿ ಬರಲು ಬಾಕಿಯಿದೆ. ಬುಧವಾರ 559 ಜನರನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ.
ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ರಾಯಚೂರಿನಲ್ಲಿ 4,480, ಸಿಂಧನೂರಿನಲ್ಲಿ 489, ಮಾನ್ವಿಯಲ್ಲಿ 1,534, ದೇವದುರ್ಗದಲ್ಲಿ 2,011 ಹಾಗೂ ಲಿಂಗಸೂಗೂರಿನಲ್ಲಿ 1,024 ಜನ ಸೇರಿದಂತೆ ಒಟ್ಟು 9,538 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಬುಧವಾರ ಹೊಸದಾಗಿ 140 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. 682 ಜನರು ಕ್ವಾರಂಟೈನ್ ಮುಗಿಸಿದ್ದು, ಒಟ್ಟು 1,743 ಜನರು ಸಾಂಸ್ಥಿಕ ಕ್ವಾರಂಟೈನ್ ಮುಗಿಸಿದ್ದಾರೆ.
ಬುಧವಾರ ದೇವದುರ್ಗ ತಾಲೂಕಿನಲ್ಲಿ ಐವರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 71 ಆಗಿದೆ. ಈ ಪೈಕಿ ದೇವದುರ್ಗ ತಾಲೂಕಿನಲ್ಲಿ 50, ಲಿಂಗಸೂಗೂರು ತಾಲೂಕಿನಲ್ಲಿ 4 ಮತ್ತು ರಾಯಚೂರು ತಾಲೂಕಿನಲ್ಲಿ 17 ಪ್ರಕರಣಗಳು ವರದಿಯಾಗಿವೆ. ಎಲ್ಲರಿಗೂ ನಗರದ ಒಪೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.