ಲಿಂಗಸುಗೂರು: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಯರಗೋಡಿಯಲ್ಲಿ ರೈತರೊಬ್ಬರ ಮನೆಗೆ ಬೆಂಕಿ ತಗುಲಿ, ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಹೊಲಕ್ಕೆ ಹೋಗಿ ಬರುವಷ್ಟರಲ್ಲಿ ರೈತನ ಮನೆಗೆ ಬೆಂಕಿ: ನಗ-ನಾಣ್ಯ ಸುಟ್ಟು ಭಸ್ಮ - ಮನೆಗೆ ಬೆಂಕಿ
ಅಗ್ನಿ ಅವಘಡದಿಂದ ಅಪಾರ ಹಾನಿಯಾಗಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ.
ರೈತನ ಮನೆಗೆ ಬೆಂಕಿ
ರೈತ ಬಸವರಾಜ ಹಾಲಭಾವಿ ಎಂಬ ರೈತರ ಮನೆ ಸುಟ್ಟಿದೆ. ಕುಟುಂಬಸ್ಥರು ಕೃಷಿ ಚಟುವಟಿಕೆಗೆ ಹೋದಾಗ ಬುಧವಾರ ಸಾಯಂಕಾಲದ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಮನೆಯಲ್ಲಿದ್ದ 2 ಲಕ್ಷ ರೂ. ನಗದು, 3 ತೊಲೆ ಬಂಗಾರ, ಬೆಳ್ಳಿ ಒಡವೆಗಳು ಸುಟ್ಟು ಕರಕಲಾಗಿವೆ.
ಅಗ್ನಿ ಅವಘಡದಿಂದ ಅಪಾರ ಹಾನಿಯಾಗಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಘಟನೆಯ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದರು.