ರಾಯಚೂರು:ನಾಳೆ ನಡೆಯಲಿರುವ ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾ ಆಯೋಗ ಅಂತಿಮ ಸಿದ್ಧತೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶರತ್ ಬಿ. ತಿಳಿಸಿದರು.
ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಂತಿಮ ಸಿದ್ಧತೆ
ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆ, ಅನ್ನದ ನಾಡು, ತುಂಗೆಯ ಬೀಡು ರಾಯಚೂರು ಜಿಲ್ಲೆಯಲ್ಲಿ ನಾಳೆ ಮತದಾನ ನಡೆಯಲಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದಾದ್ಯಂತ ಅಂತಿಮ ಹಂತದ ಸಿದ್ಧತೆ ನಡೆದೆ.
ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 19,27,758 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. 2,184 ಮತದಾನ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಸದರಿ ಕ್ಷೇತ್ರದಲ್ಲಿ 9,55,586 ಪುರುಷ, 9,71,805 ಮಹಿಳಾ ಹಾಗೂ ಇತರ 367 ಮತದಾರರು ಸೇರಿ ಒಟ್ಟು 1927758 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಬೆಳಗ್ಗೆ 7 ರಿಂದ ಸಂಜೆ 6 ವರೆಗೆ ಮತದಾನ ನಡೆಯಲಿದ್ದು, ಬೂತ್ನಲ್ಲಿ ಮೊಬೈಲ್ ಬಳಕೆ ಬಳಕೆ ನಿಷೆಧಿಸಲಾಗಿದೆ ಎಂದರು.
ಇನ್ನು ಇದರಲ್ಲಿ 82 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿಲಾಗಿದ್ದು ಮತಗಟ್ಟೆಗಳಲ್ಲಿ ಶಾಮಿಯಾನ, ಕುಡಿಯುವ ನೀರು, ವಿಕಲಚೇತನರಿಗೆ ವ್ಹೀಲ್ ಚೇರ್, ಬಸ್ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ 1 ಎಎಸ್, 4 ಅಡಿಷನಲ್ ಎಸ್ಪಿ ಸೇರಿದಂತೆ 7 ಕೆಎಸ್ಆರ್ಪಿ ತುಕಡಿ ನೇಮಿಸಲಾಗಿದೆ ಎಂದು ಮತಗಟ್ಟೆಗಳ ಬಗ್ಗೆ ಮಾಹಿತಿ ನೀಡಿದರು.