ಕರ್ನಾಟಕ

karnataka

ETV Bharat / state

ಪತ್ನಿ ಮೇಲೆ ಅನೈತಿಕ ಸಂಬಂಧ ಶಂಕೆ: ಹೆತ್ತ ಮಕ್ಕಳನ್ನು ಕತ್ತು ಹಿಸುಕಿ ಕೊಂದ ಪಾಪಿ ತಂದೆ - ರಾಯಚೂರು

ತಂದೆ ತನ್ನ ಇಬ್ಬರು ಮಕ್ಕಳನ್ನು ಕೊಂದಿರುವ ಅಮಾನವೀಯ ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.

Raichur latest crime news
ನಿಂಗಪ್ಪ ಕೊಲೆ ಆರೋಪಿ

By

Published : Feb 12, 2023, 1:20 PM IST

ರಾಯಚೂರು: ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿ ತನ್ನ ಇಬ್ಬರು ಮಕ್ಕಳನ್ನು ಪಾಪಿ ತಂದೆಯೊಬ್ಬ ಕೊಲೆ ಮಾಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಲೇರದೊಡ್ಡಿ ಗ್ರಾಮದಲ್ಲಿ ನಡೆದಿದೆ. ರಾಘವೇಂದ್ರ (3) ಹಾಗೂ ಶಿವರಾಜ್ (5) ಹತ್ಯೆಯಾದ ಮಕ್ಕಳು. ನಿಂಗಪ್ಪ ಕೊಲೆ ಆರೋಪಿ.

ನಿಂಗಪ್ಪ ಶನಿವಾರ ರಾತ್ರಿ 8:40ರ ಸುಮಾರಿಗೆ ಜಗಳವಾಡಿದ್ದಾನೆ. ಮಕ್ಕಳು ಅನೈತಿಕ ಸಂಬಂಧದಿಂದ ಜನಿಸಿವೆ ಎಂದು ಆರೋಪಿಸಿ ಕೆ.ಇರಬಗೇರಾ ಗ್ರಾಮದಲ್ಲಿದ್ದ ಮಕ್ಕಳನ್ನು ತನ್ನ ಜಕ್ಲೇರದೊಡ್ಡಿ ಗ್ರಾಮದ ಮನೆಗೆ ಕರೆ ತಂದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪತ್ನಿ ದೇವದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಹೆತ್ತ ಕರುಳಿನ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ:ಪ್ರೇಯಸಿ ಭೇಟಿ ವೇಳೆ ಆಕೆಯ ಅಣ್ಣ, ಸ್ನೇಹಿತರಿಂದ ಪ್ರಿಯಕರನ ಮೇಲೆ ಮಾರಣಾಂತಿಕ ಹಲ್ಲೆ

ಇಲ್ಲೊಬ್ಬ ನಿಷ್ಕರುಣಿ ತಾಯಿ:ತಾಯಿಯೊಬ್ಬಳು ತನ್ನ ಹೆತ್ತ ಮಕ್ಕಳನ್ನು ಕೊಂದಿರುವ ಹೃದಯ ವಿದ್ರಾವಕ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಮಾನಸಿಕ ಅಸ್ವಸ್ಥ ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಹತ್ಯೆಗೈದಿರುವ ಘಟನೆ ಔರಂಗಾಬಾದ್​ನ ಸತಾರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಸತಾರಾ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ತನಿಖೆ ನಂತರ ತಾಯಿಯೇ ಕೊಲೆಗೈದಿರುವ ವಿಷಯ ಹೊರಬಿದ್ದಿತ್ತು. ಅಲ್ಲದೆ, ಆಕೆ ಮಾನಸಿಕ ಅಸ್ವಸ್ಥೆ ಎಂದು ತಿಳಿದು ಬಂದಿತ್ತು.

ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂದಮ್ಮಗಳು:ಔರಂಗಾಬಾದ್ ನಗರದ ಸಾದತ್ ನಗರ ಪ್ರದೇಶದ ವಸತಿ ಗೃಹದಲ್ಲಿ ಇಬ್ಬರು ಮಕ್ಕಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮೃತ ಮಕ್ಕಳ ಪೋಷಕರ ದೂರಿನ ಪ್ರಕಾರ, ರಾತ್ರಿ ತಂದೆ-ತಾಯಿಯೊಂದಿಗೆ ಊಟ ಮುಗಿಸಿ, ಇಬ್ಬರು ಮಕ್ಕಳು ಮಲಗಿದ್ದರು. ಬೆಳಗ್ಗೆ ಆದರೂ ಮಕ್ಕಳು ಎದ್ದೇಳದೆ ಇದ್ದುದನ್ನು ಕಂಡ ಕುಟುಂಬಸ್ಥರು ಕೋಣೆಗೆ ಹೋಗಿ ನೋಡಿದಾಗ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿರುವುದನ್ನು ಕಂಡು ಕೂಡಲೇ ಇಬ್ಬರನ್ನೂ ಔರಂಗಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ವೈದರು ಪರೀಶಿಲಿಸಿದ ನಂತರ ಮಕ್ಕಳಿಬ್ಬರು ಸಾವನ್ನಪ್ಪಿರುವ ಬಗ್ಗೆ ಘೋಷಣೆ ಮಾಡಿದ್ದರು.

ಇದನ್ನು ಓದಿ:ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಕೊಂದ ಮಾನಸಿಕ ಅಸ್ವಸ್ಥ ತಾಯಿ.. ಕರುಳ ಕುಡಿಗಳನ್ನು ಬಿಡದ ನಿರ್ದಯಿ

9 ತಿಂಗಳ ಹಸುಗೂಸು ಹತ್ಯೆ: ಪಾಪಿಯೊಬ್ಬ 9 ತಿಂಗಳ ಹಸುಗೂಸನ್ನು ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಅಮಾನವೀಯ ಪ್ರಕರಣ ಯಾದಗಿರಿ ಜಿಲ್ಲೆಯ ಬದ್ದೆಪಲ್ಲಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ತನುಶ್ರೀ ಮೃತ ಕಂದಮ್ಮ. ರಾಮು ಪಲ್ಲುರ್ ಕೊಲೆ ಮಾಡಿದ ಆರೋಪಿ ತಂದೆ.

ಇದನ್ನೂ ಓದಿ:ಅಳುತ್ತಾ ಕಿರಿಕಿರಿ ಮಾಡ್ತಿದೆ ಎಂದು 9 ತಿಂಗಳ ಹೆಣ್ಣು ಮಗುವನ್ನೇ ಕೊಲೆ ಮಾಡಿದ ಕಿರಾತಕ ತಂದೆ

ABOUT THE AUTHOR

...view details