ರಾಯಚೂರು: ಮಗನನ್ನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲೆಂದು ಬೈಕ್‌ನಲ್ಲಿ ಕರೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಮಿಯ್ಯಾಪುರ ಗ್ರಾಮದ ಬಳಿ ನಡೆದಿದೆ.
ಮಗನನ್ನು ಪರೀಕ್ಷೆಗೆ ಕರೆದುಕೊಂಡು ಹೋಗುವ ವೇಳೆ ಅಪಘಾತ: ತಂದೆ ಸ್ಥಳದಲ್ಲೇ ಸಾವು
ಮಗನನ್ನು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲೆಂದು ಬೈಕ್‌ನಲ್ಲಿ ಕರೆದುಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರಲ್ಲಿ ನಡೆದಿದೆ.
ರಾಯಚೂರು ರಸ್ತೆ ಅಪಘಾತ
ಮಿಯ್ಯಾಪುರ ಗ್ರಾಮದಿಂದ ಗಬ್ಬೂರು ಪರೀಕ್ಷಾ ಕೇಂದ್ರಕ್ಕೆ ಮಗನನ್ನು ಕರೆದುಕೊಂಡು ಹೋಗುವ ವೇಳೆ ಆಕಳು ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿದೆ. ಕೆಳಗೆ ಬಿದ್ದ ನಾಗಾರೆಡ್ಡಿ(53) ತಲೆಗೆ ಗಂಭೀರ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿದ್ಯಾರ್ಥಿ ಕೂಡ ಗಾಯಗೊಂಡಿದ್ದಾನೆ.
ಮೃತ ನಾಗಾರೆಡ್ಡಿ ಸುಕೇಶ್ವರಹಾಳ ಗ್ರಾಮದ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Last Updated : Jun 25, 2020, 1:04 PM IST