ರಾಯಚೂರು: ಲಿಂಗಸುಗೂರು ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ಅತಿಯಾದ ಮದ್ಯ ವ್ಯಸನಿಯಾಗಿದ್ದ ಚಾಲಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಲಿಂಗಸೂಗುರಲ್ಲಿ ನೇಣಿಗೆ ಶರಣಾದ ಮದ್ಯ ವ್ಯಸನಿ - latest raichur news
ಮದ್ಯ ವ್ಯಸನಿಯೊಬ್ಬ ನೇಣಿಗೆ ಶರಣಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ನಡೆದಿದೆ.
ನೇಣಿಗೆ ಶರಣಾದ ಮದ್ಯವ್ಯಸನಿ
ಲಕ್ಷ್ಮಪ್ಪ ಚಲುವಾದಿ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದು, ಮೃತನ ಪತ್ನಿ ನೀಲಮ್ಮ ಚಲುವಾದಿ, ಲಿಂಗಸುಗೂರು ಠಾಣೆಗೆ ಬಂದು ಗಂಡ ಅತಿಯಾಗಿ ಮದ್ಯ ಸೇವನೆ ಮಾಡಿ ಕಿರುಕುಳ ನೀಡುತ್ತಿದ್ದ. ಇಂದು ಕಿರುಕುಳ ತಾಳಲಾರದೆ ನಾನು ಹೊರಗಡೆ ಹೋದಾಗ ನೇಣು ಹಾಕಿಕೊಂಡು ಮೃತೊಟ್ಟಿದ್ದಾನೆ ಎಂದು ಹೇಳಿಕೆ ನೀಡಿದ್ದಾಳೆ. ಈತ ತಂದೆ, ತಾಯಿ, ಸಹೋದರಿಯರ ಜೊತೆಗೆ ವಾಸವಾಗಿದ್ದ. ಸಾವಿನ ಬಗ್ಗೆ ಯಾರ ಮೇಲೂ ಸಂಶಯವಿಲ್ಲ ಎಂದು ಪತ್ನಿ ನೀಲಮ್ಮ ಚಲುವಾದಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್ಐ ಪ್ರಜಾಶರೆಡ್ಡಿ ಡಂಬಳ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.