ರಾಯಚೂರು: ವಾಹನಕ್ಕೆ ಡೀಸೆಲ್ ಹಾಕಿಸಲು ತೆರಳಿದ ವಾಹನ ಮಾಲೀಕರಿಗೆ ಪೆಟ್ರೋಲ್ ಬಂಕ್ನವರು ಡೀಸೆಲ್ ಬದಲು ನೀರು ಹಾಕಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಕಂಡುಬಂದಿದೆ.
ಡೀಸೆಲ್ ಬದಲು ನೀರು: ಬಂಕ್ ಮಾಲೀಕರ ವಿರುದ್ಧ ಗ್ರಾಹಕರು ಆಕ್ರೋಶ - ರಾಯಚೂರು ಜಿಲ್ಲೆಯ ಮಸ್ಕಿ
ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಬಂಕ್ವೊಂದರಲ್ಲಿ ಡೀಸೆಲ್ ಬದಲು ನೀರು ಹಾಕುತ್ತಿದ್ದು ಬಂಕ್ ಮಾಲೀಕರ ವಿರುದ್ಧ ಗ್ರಾಹಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಬಂಕ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗ್ರಾಹಕರು
ಇಂದು ಬೆಳಗ್ಗೆ ಮಾಲೀಕರು ತಮ್ಮ ವಾಹನಕ್ಕೆ ಡೀಸೆಲ್ ಹಾಕಿಸಿಕೊಳ್ಳಲು ತೆರಳಿದ ವೇಳೆ ಇಂಧನದ ಬದಲಿಗೆ ನೀರು ಹಾಕಿದ್ದಾರೆ. ಇದರಿಂದಾಗಿ ವಾಹನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಇಂಜಿನ್ ಫುಲ್ ಬ್ಲಾಕ್ ಆಗಿ ವಾಹನಗಳು ಕೆಟ್ಟು ನಿಂತಿವೆ.
ಇನ್ನು ಕೆಲವರು ಸಾವಿರಾರು ರೂ. ಮೌಲ್ಯದ ಡೀಸೆಲ್ ಹಾಕಿಸಿಕೊಂಡಿದ್ದು, ಬಂಕ್ನಲ್ಲಿ ಡೀಸೆಲ್ ಹಾಕಿಸಿಕೊಂಡ ಗ್ರಾಹಕರು, ಮಾಲೀಕರ ವಿರುದ್ಧ ಸ್ಥಳದಲ್ಲೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.