ರಾಯಚೂರು: ತಾಲೂಕಿನ ಶಕ್ತಿನಗರ ಹೈದರಾಬಾದ್-ರಾಯಚೂರು ಬ್ರಿಡ್ಜ್ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ಕೃಷ್ಣಾ ನದಿ ತೀರದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ: ರೈತರಲ್ಲಿ ಆತಂಕ - ರಾಯಚೂರು
ಕೃಷ್ಣಾ ನದಿ ತೀರದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದ್ದು, ನದಿ ತೀರದ ರೈತರಲ್ಲಿ ಆತಂಕ ಮೂಡಿದೆ.
ಕೃಷ್ಣಾ ನದಿ ತೀರದಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ..
ಜಿಲ್ಲೆಯ ಬಲ ಭಾಗದಲ್ಲಿ ನೂರಾರು ಕಿಲೋ ಮೀಟರ್ ಉದ್ದದಷ್ಟು ಕೃಷ್ಣಾ ನದಿ ಹರಿಯುತ್ತಿದ್ದು, ಇಂದು ಶಕ್ತಿನಗರದ 2ನೇ ಕ್ರಾಸ್ ಬ್ರಿಡ್ಜ್ ಬಳಿ ಮೊಸಳೆ ಪ್ರತ್ಯಕ್ಷವಾಗಿದೆ. ನದಿ ತೀರದಲ್ಲಿ ಹೊಲ-ಗದ್ದೆಗಳಿದ್ದು, ಅಲ್ಲಿನ ರೈತರು ವ್ಯವಸಾಯ ಚಟುವಟಿಕೆಗಳಿಗೆ ತೊಡಗುತ್ತಾರೆ. ಅಲ್ಲದೇ ಜಾನುವಾರುಗಳನ್ನ ಸಹ ಮೇಯಿಸಲು ಹೋಗುತ್ತಾರೆ. ಮೊಸಳೆ ಆಹಾರ ಅರಸಿಕೊಂಡು ನದಿಯ ದಡಕ್ಕೆ ಬಂದಿದ್ದು, ಸುತ್ತಮುತ್ತಲಿನ ಜಮೀನಿನ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಮೊಸಳೆ ಕಂಡು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಚಿತ್ರ ಸೆರೆ ಹಿಡಿದ್ದಾರೆ.