ರಾಯಚೂರು: ನಗರದ ಹೊರವಲಯದಲ್ಲಿ ಬರುವ ಮಲಿಯಬಾದ್ ಬಳಿ ಇರುವ ಗೋ ಶಾಲೆಯಲ್ಲಿ ಗೋವುಗಳು ನರಳಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಗೋ ಶಾಲೆಯಲ್ಲಿ ಕೇಳಲಾಗುತ್ತಿಲ್ಲ ಆಕಳುಗಳ ನರಳಾಟ
ರಾಯಚೂರು ಜಿಲ್ಲೆಯ ಗೋ ಶಾಲೆಯೊಂದರಲ್ಲಿ ಕೆಲ ಗೋವುಗಳು ಸಾವನ್ನಪ್ಪುತ್ತಿದ್ದು,ಇನ್ನು ಕೆಲವು ಗೋವುಗಳು ನರಳಾಡುತ್ತಿವೆ. ಈ ದೃಶ್ಯ ಮನಕಲಕುವಂತಿದೆ.
ಇನ್ನು ಈ ಗೋ ಶಾಲೆಯನ್ನು ಗೋ ರಕ್ಷಣೆ ಸಂಘ ನಿರ್ವಹಣೆ ಮಾಡುತ್ತಿದೆ. ಆದರೆ, ಕಳೆದ ಸುಮಾರು 15 ದಿನಗಳಿಂದ ಗೋ ಶಾಲೆಯಲ್ಲಿರುವ ಆಕಳುಗಳು ಈ ರೀತಿ ನರಳಾಟ ಅನುಭವಿಸುತ್ತ ಕೊನೆಯುಸಿರೆಳೆಯುತ್ತಿವೆ ಎನ್ನಲಾಗುತ್ತಿದೆ. ಈ ಬಗ್ಗೆ ಗೋ ಶಾಲಾ ಸಂಘದ ಸದಸ್ಯರಿಗೆ ಕೇಳಿದ್ರೆ, ಗೋ ರಕ್ಷಣೆ ಸಂಘ ಎರಡು ಗೋ ಶಾಲೆಗಳನ್ನ ನಿರ್ವಹಣೆ ಮಾಡುತ್ತಿದೆ. ಗೋ ಶಾಲೆಗಳಿಗೆ ಆರೋಗ್ಯಕರವಾದ ಆಕಳುಗಳು ಬರುವುದಿಲ್ಲ. ಬದಲಾಗಿ ಅನಾರೋಗ್ಯಕ್ಕೆ ತುತ್ತಾಗಿರುವಂತಹ ಆಕಳುಗಳು ಬರುತ್ತವೆ. ಅವುಗಳಿಗೆ ಗೋ ಶಾಲೆಯಲ್ಲಿರುವಂತಹ ಸೊಪ್ಪು ಮತ್ತು ಮೇವು ಹಾಕಿ ಪಾಲನೆ ಮಾಡಲಾಗುತ್ತಿದೆ ಅಂತಾರೆ ಗೋ ಶಾಲೆ ಸಮಿತಿ ಸದಸ್ಯರು.
ಇನ್ನು ಈ ಘಟನೆ ಕುರಿತು ತಾಲೂಕು ವೈದ್ಯಾಧಿಕಾರಿಗಳನ್ನು ಕೇಳಿದ್ರೆ, ಈ ಕುರಿತಂತೆ ಯಾವುದೇ ಮಾಹಿತಿಯಿಲ್ಲ. ಅಲ್ಲಿನ ಗೋ ಶಾಲೆಯಲ್ಲಿನ ಗೋವುಗಳಿಗೆ ಕಾಲ ಕಾಲಕ್ಕೆ ಲಸಿಕೆಗಳನ್ನ ಹಾಕಲಾಗುತ್ತೆ. ಯಾವುದೇ ಕಾಯಿಲೆ ಮತ್ತು ರೋಗ ಹರಡಿದ್ರೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಚಿಕಿತ್ಸೆ ನೀಡಲಾಗುತ್ತೆ. ಈ ವರೆಗೂ ಕಾಲುಬಾಯಿ ರೋಗದಂತಹ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂಬ ಮಾಹಿತಿ ನೀಡಿದ್ದಾರೆ.
TAGGED:
vis and script