ರಾಯಚೂರು: ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ಸಿಐಡಿ ಎಸ್ಪಿ ಶರಣಪ್ಪ ರಾಯಚೂರಿಗೆ ಭೇಟಿ ನೀಡಿದ್ದಾರೆ.
ರಾಯಚೂರು ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ: ಸಿಐಡಿ ತಂಡದಿಂದ ಚುರುಕುಗೊಂಡ ತನಿಖೆ - undefined
ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಕೈಗೊಳ್ಳಲು ಸಿಐಡಿ ತಂಡ ರಾಯಚೂರಿಗೆ ಆಗಮಿಸಿದೆ.
ರಾಯಚೂರಿಗೆ ಭೇಟಿ ನೀಡಿದ ಸಿಐಡಿ ತಂಡ
ಭಾನುವಾರ ತನಿಖಾ ತಂಡ ನಗರಕ್ಕೆ ಆಗಮಿಸಿ ಮೃತದೇಹ ಪತ್ತೆಯಾದ ಸ್ಥಳವನ್ನ ಪರಿಶೀಲನೆ ನಡೆಸಿ ಮಾಹಿತಿ ಕಾಲೆ ಹಾಕಿತ್ತು. ಇನ್ನು ತನಿಖೆಯ ಎರಡನೇಯ ದಿನವಾದ ಇಂದು ಸಿಐಡಿ ಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ವಿದ್ಯಾರ್ಥಿನಿಯ ಕಾಲೇಜು, ಶವ ಪತ್ತೆಯಾದ ಸ್ಥಳ, ಬಂಧಿತ ಆರೋಪಿ ಮತ್ತು ಮೃತಳ ಪೋಷಕರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ. ತನಿಖಾ ತಂಡ ನಿನ್ನೆಯೇ ನಗರಕ್ಕೆ ಆಗಮಿಸಿದೆ. ಇಂದು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ.
Last Updated : Apr 22, 2019, 1:39 PM IST