ಕರ್ನಾಟಕ

karnataka

ETV Bharat / state

ಸ್ವಲ್ಪ ತಡಮಾಡಿದ್ದರೂ ಕೊರಳಿಗೆ ಬೀಳುತ್ತಲಿತ್ತು ತಾಳಿ.. ರಾಯಚೂರಿನಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್

ರಾಯಚೂರಿನಲ್ಲಿ ವಿವಾಹ ಬಂಧನಕ್ಕೆ ಸಿಲುಕುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ರಕ್ಷಿಸಿದ್ದಾರೆ.

ಬಾಲ್ಯ ವಿವಾಹ

By

Published : Apr 10, 2019, 11:07 PM IST

ರಾಯಚೂರು :ಅಪ್ರಾಪ್ತ ಬಾಲಕಿಯ ವಿವಾಹ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ತಂಡ, ಬಾಲ್ಯ ವಿವಾಹ ತಡೆದು ಬಾಲಕಿಯನ್ನು ರಕ್ಷಿಸಿರುವ ಘಟನೆ ಲಿಂಗಸುಗೂರಿನಲ್ಲಿ ನಡೆದಿದೆ.

ತಾಲೂಕಿನ ನೀರಲಕೇರಿ ಗ್ರಾಮದ ರಾಮಣ್ಣ ಬಡಗಿ ಎಂಬುವರು ಅಪ್ರಾಪ್ತ ಬಾಲಕಿಗೆ ವಿವಾಹ ಮಾಡಲು ತಯಾರಿ ನಡೆಸಿದ್ದರು. ಖಚಿತ ಮಾಹಿತಿ ಮೇರೆಗೆ ಶಿಶು ಅಭಿವೃದ್ಧಿ ಯೊಜನಾಧಿಕಾರಿಗಳು ವಿವಾಹ ಬಂಧನಕ್ಕೆ ಸಿಲುಕುತ್ತಿರುವ ಬಾಲಕಿಯನ್ನು ರಕ್ಷಿಸಿ ತಂದೆಯಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details