ಕರ್ನಾಟಕ

karnataka

ದೇವರಭೂಪುರದಲ್ಲಿ ವಾಂತಿ-ಭೇದಿ ಪ್ರಕರಣ ಉಲ್ಬಣ: ಎಚ್ಚೆತ್ತುಕೊಂಡ ಗ್ರಾ.ಪಂ

By

Published : Apr 13, 2020, 8:44 AM IST

ದೇವರಭೂಪುರದಲ್ಲಿ ವಾಂತಿ-ಭೇದಿ ಪ್ರಕರಣಗಳು ಉಲ್ಬಣಗೊಳ್ಳುತ್ತಿದ್ದು, ಕಲುಷಿತ ಕುಡಿವ ನೀರು ಸೇವನೆಯಿಂದ ಬಂದಿರಬಹುದೆಂದು ಆರೋಗ್ಯ ಇಲಾಖೆ ಹೇಳಿದೆ.

case of vomiting-diarrhea in Raichuru
ದೇವರಭೂಪುರದಲ್ಲಿ ವಾಂತಿ-ಭೇದಿ ಪ್ರಕರಣ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕು ದೇವರಭೂಪುರದಲ್ಲಿ ವಾಂತಿ-ಭೇದಿ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಕಾರಣ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದೆ.

ನಾಲ್ಕು ದಿನಗಳಿಂದ ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಲುಷಿತ ಕುಡಿವ ನೀರು ಸೇವನೆಯಿಂದ ಬಂದಿರಬಹುದೆಂದು ಆರೋಗ್ಯ ಇಲಾಖೆ ಹೇಳಿದೆ. ತಾಲೂಕು ಅಡಳಿತದ ಎಚ್ಚರಿಕೆ ನಂತರದಲ್ಲಿ ಆಡಳಿತ ಮಂಡಳಿ ಸದಸ್ಯರು ಕುಡಿವ ನೀರು ಪೂರೈಸುವ ತೆರೆದ ಬಾವಿ ಸುತ್ತ ಜಮೆಗೊಂಡಿದ್ದ ಚರಂಡಿ ನೀರು ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿ ಜನತೆ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿದೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿರೇಶ ಗುಂಡಸಾಗರ ಮಾತನಾಡಿ, ಏಕಾಏಕಿ ಪ್ರಕರಣಗಳು ವರದಿ ಆಗಿದ್ದು ನಿಜ. ಆರೋಗ್ಯ ಇಲಾಖೆ ಮಾರ್ಗದರ್ಶನದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ABOUT THE AUTHOR

...view details