ಕರ್ನಾಟಕ

karnataka

ETV Bharat / state

ರಾಯಚೂರು; ಕಾಲೇಜು ವಿದ್ಯಾರ್ಥಿನಿ ಶವವಾಗಿ ಪತ್ತೆ, ಪ್ರಾಚಾರ್ಯರ ಮೇಲೆ ಅತ್ಯಾಚಾರ, ಕೊಲೆ ಆರೋಪ

ಹಾಸ್ಟೆಲ್​ನಲ್ಲಿ ಶವವಾಗಿ ಪತ್ತೆಯಾದ ವಿದ್ಯಾರ್ಥಿನಿ - ಪ್ರಿನ್ಸಿಪಾಲ್​ ವಿರುದ್ಧ ಗಂಭೀರ ಆರೋಪ - ದೂರು ನೀಡಿದ ಬಾಲಕಿಯ ಸಂಬಂಧಿಕರು

Raichur
ರಾಯಚೂರು

By

Published : Feb 4, 2023, 11:05 AM IST

Updated : Feb 4, 2023, 11:20 AM IST

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ವಸತಿ ನಿಲಯದಲ್ಲಿ ಶವವಾಗಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ. ಲಿಂಗಸೂಗೂರಿನ ಶಿಕ್ಷಣ ಸಂಸ್ಥೆಯೊಂದರ ಮಹಿಳಾ ವಿದ್ಯಾರ್ಥಿನಿ ವಸತಿ ನಿಲಯದ ಕೊಠಡಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಈ ಸಾವಿನ ಹಿಂದೆ ಕಾಲೇಜು ಪ್ರಾಚಾರ್ಯರ ಕೈವಾಡ ಇದೆ ಎಂದು ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಸುತ್ತಿದ್ದಾರೆ. ಅದೇ ಕಾಲೇಜಿನ ಪ್ರಾಚಾರ್ಯರೊಬ್ಬರ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಆರೋಪ ಕೇಳಿ ಬರುತ್ತಿದ್ದು, ಅವರ ಮೇಲೆ ದೂರು ಕೂಡ ನೀಡಲಾಗಿದೆ. ಮೃತ ವಿದ್ಯಾರ್ಥಿನಿ ತಾಲೂಕಿನ ಪದವಿ ಪೂರ್ವ ಕಾಲೇಜಿನಲ್ಲಿ ಪಿ.ಯು.ಸಿ ಪ್ರಥಮ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದಳು. ಅಲ್ಲಿನ ಸಂಸ್ಥೆಯ ಮಹಿಳಾ ವಸತಿ ನಿಲಯದಲ್ಲಿ ವಾಸವಿದ್ದಳು.

ಪ್ರಾಚಾರ್ಯ ಆಗಾಗ್ಗೆ ಲೈಂಗಿಕವಾಗಿ ಪೀಡಿಸುತ್ತಿದ್ದ.. ಪ್ರಾಚಾರ್ಯರು ವಿದ್ಯಾರ್ಥಿನಿಗೆ ಆಗಾಗ್ಗೆ ಲೈಂಗಿಕ ಪೀಡಿಸುತ್ತಿದ್ದ, ಅಲ್ಲದೇ ಅವಾಚ್ಯ ಶಬ್ದಗಳಿಂದ ವೈಯಕ್ತಿವಾಗಿ ಹಾಗೂ ಜಾತಿ ನಿಂದನೆ ಮಾಡಿದ್ದಾನೆ. 2023 ಫೆಬ್ರವರಿ 3 ರಂದು ಪ್ರಾಚಾರ್ಯ ವಿದ್ಯಾರ್ಥಿನಿಯನ್ನು ತನ್ನ ಕೊಠಡಿಗೆ ಕರೆದು, ಅತ್ಯಾಚಾರ ಮಾಡಿ, ಸಮವಸ್ತ್ರದಿಂದ ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ವಿದ್ಯಾರ್ಥಿನಿಯ ಚಿಕ್ಕಪ್ಪ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ‌. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಮುಂದೆವರೆಸಿದ್ದಾರೆ.

ಬೆಳಗಾವಿ: ಆಂಬ್ಯುಲೆನ್ಸ್ ಗೆ ಟ್ಯಾಕ್ಟರ್ ಡಿಕ್ಕಿ ಓರ್ವ ಸಾವು: ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆ ಸಾಗಿಸುವ ಸಮಯದಲ್ಲಿ ಮತ್ತೆ ಅಪಘಾತ ಸಂಭವಿಸಿ ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್​ನಲ್ಲಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಮುಂದಿನಿಂದ ಬರುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಅಕ್ಬರ್ ಸಾಬ್ ಹುಸೇನ್ ನೇಸರಗಿ (28) ಮೃತ ದುರ್ದೈವಿಯಾಗಿದ್ದು. ಮೃತನ ತಾಯಿ ಜನ್ನಿತವಬಿ ಸಹೋದರ ಮಹಮ್ಮದ್ ಅಲಿ ಸಂಬಂಧಿ ಮಹಮ್ಮದ್ ಸಾಬ್ ಶೆಫಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಅಪಘಾತವಾದ ಆ್ಯಂಬುಲೆನ್ಸ್​ ಹಾಗು ಮೃತಪಟ್ಟ ಅಕ್ಬರ್ ಸಾಬ್ ಹುಸೇನ್ ನೇಸರಗಿ

ಘಟನೆ ವಿವಿರ: ಸವದತ್ತಿ ದೇವಸ್ಥಾನದ ಬಳಿ ಬಳೆ ವ್ಯಾಪಾರ ಮಾಡುತ್ತಿದ್ದ ಅಕ್ಬರ್ ಸಾಬ್ ಹುಸೇನ್ ಸಾಬ್ ನೇಸರಗಿಗೆ ಕಳೆದ ದಿನದ ಹಿಂದೆ ಸವದತ್ತಿಯಲ್ಲಿ ಅಪಘಾತ ಸಂಭವಿಸಿತ್ತು, ಹೀಗಾಗಿ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು, ಆದರೆ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ನಗರಕ್ಕೆ ಹೋಗುವಂತೆ ಸೂಚನೆ ಮೇರೆಗೆ 108 ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೊಗುವ ಮಾರ್ಗ ಮದ್ಯದಲ್ಲಿ ಮತ್ತೆ ಅಪಘಾತ ಸಂಭವಿಸಿ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ದೊಡ್ಡವಾಡ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಪ್ರೀತಿ ಹೆಸರಿನಲ್ಲಿ ಯುವತಿ ಮೇಲೆ ಅತ್ಯಾಚಾರ ಆರೋಪ; ವಂಚಿಸಿದ ಯುವಕ‌ ಬಂಧನ

Last Updated : Feb 4, 2023, 11:20 AM IST

ABOUT THE AUTHOR

...view details