ಕರ್ನಾಟಕ

karnataka

ETV Bharat / state

ವಿವಾಹ ಆಮಂತ್ರಣ ಪತ್ರ ನೀಡಿ ವಾಪಸ್ಸಾಗುವ ವೇಳೆ ಅಪಘಾತ; ವಧು ಸೇರಿ ಮೂವರು ಸಾವು - Bike rider Died in Raichur

ಮಸ್ಕಿಯಿಂದ ಲಿಂಗಸುಗೂರಿಗೆ ಬೈಕ್​ನಲ್ಲಿ ತೆರಳುತ್ತಿದ್ದ ಓರ್ವ ಪುರುಷ, ವಧು ಸೇರಿ ಇಬ್ಬರು ಯುವತಿಯರು ಅಪಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

bike-accident-on-the-outskirts-of-musky-town
ಬೈಕ್​ ಸವಾರ ಮೃತ

By

Published : Jan 18, 2021, 7:38 PM IST

Updated : Jan 18, 2021, 8:41 PM IST

ರಾಯಚೂರು: ವಿವಾಹ ಆಮಂತ್ರಣ ಪತ್ರ ನೀಡಿ ವಾಪಸ್ ಬರುವಾಗ ವಧು ಸೇರಿ ಮೂವರು ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ರಾಯಚೂರಿನಲ್ಲಿ ಸಂಭವಿಸಿದೆ.

ಮಸ್ಕಿ ಪಟ್ಟಣದ ಹೊರವಲಯದಲ್ಲಿರುವ ಎನ್‌ಈಕೆಎಸ್‌ಆರ್‌ಟಿಸಿ ಡಿಪೋ ಬಳಿ ದುರ್ಘಟನೆ ನಡೆದಿದೆ. ಈ ಮೂವರು ಸ್ನೇಹಿತರಿಗೆ ವಿವಾಹ ಆಮಂತ್ರಣ ಪತ್ರ ನೀಡಿ ಮಸ್ಕಿಯಿಂದ ಲಿಂಗಸುಗೂರಿಗೆ ತೆರಳುತ್ತಿದ್ದರು ಎಂಬ ಮಾಹಿತಿ ದೊರೆತಿದೆ.

ಘಟನೆ ನಡೆದಿದ್ದು ಹೇಗೆ?

ಮಸ್ಕಿಯಿಂದ ಲಿಂಗಸುಗೂರಿಗೆ ತ್ರಿಬಲ್ ರೈಡ್​ನಲ್ಲಿ ಹೋಗುತ್ತಿದ್ದ ಸವಾರ ವೀರೇಶ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಚಿತ್ರನಾಳ ಗ್ರಾಮದ ವೀರೇಶ (23), ಅಡವಿಭಾವಿ ಗ್ರಾಮದ ಅರುಣಾಕ್ಷಿ (22) ಹಾಗು ವಧು ರಜೀಯಾ ಬೇಗಂ(22) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಮಸ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಜೀಯಾ ಬೇಗಂ ಅವರ ವಿವಾಹ ಇದೇ ತಿಂಗಳು 23ಕ್ಕೆ ನಿಗದಿಯಾಗಿತ್ತು.

ಇದನ್ನೂ ಓದಿ:ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ.. ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ

Last Updated : Jan 18, 2021, 8:41 PM IST

ABOUT THE AUTHOR

...view details