ರಾಯಚೂರು :ಕೊರೊನಾ ವೈರಸ್ ಭೀತಿಯಿಂದ ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್ ಜಾರಿಗೊಳಿಸಿ, ಅಗತ್ಯ ವಸ್ತುಗಳ ಅಂಗಡಿ ಮತ್ತು ವೈದ್ಯಕೀಯ, ತುರ್ತು ಸೇವೆಗಳನ್ನ ಹೊರತು ಪಡಿಸಿ ಉಳಿದ ಎಲ್ಲಾ ಸೇವೆಗಳನ್ನ ರಾಜ್ಯ ಸರ್ಕಾರ ಬಂದ್ ಮಾಡಿತ್ತು.
ಇದರ ಪರಿಣಾಮ ಅಬಕಾರಿ ಇಲಾಖೆಯ ವ್ಯಾಪ್ಯಿಗೆ ಬರುವಂತಹ ಮದ್ಯ ಮಾರಾಟವನ್ನ ಸ್ಥಗಿತಗೊಳಿಸಿತ್ತು. ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ಬರಬೇಕಾದ ಆದಾಯಕ್ಕೆ ಕತ್ತರಿ ಬಿದ್ದು, ಸರ್ಕಾರವೇ ಆರ್ಥಿಕ ಸಮಸ್ಯೆಗೆ ಸಿಲುಕಿತ್ತು. ಆರ್ಥಿಕ ಸಮಸ್ಯೆಯನ್ನ ಸರಿದೂಗಿಸಲು ಸರ್ಕಾರ 2020 ಮೇ 4ರಿಂದ ಪುನಃ ಮದ್ಯ ಮಾರಾಟಕ್ಕೆ ಪ್ರಾರಂಭಿಸಲಾಯಿತು.
ಅಬಕಾರಿ ಇಲಾಖೆಯ ವ್ಯಾಪ್ತಿಗೆ ಬರುವ ಮದ್ಯ ಅಂಗಡಿಗಳನ್ನ ಆರಂಭಿಸಲು ಮುಂದಾದಾಗ ಜನತೆಯಿಂದ ಪರ-ವಿರೋಧ ಅಭಿಪ್ರಾಯ ವ್ಯಕ್ತವಾದವು. ಇದರ ನಡುವೆ ಸರ್ಕಾರ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸಿಕೊಳ್ಳುವ ನಿಟ್ಟಿನಲ್ಲಿ ಮದ್ಯಂದಗಡಿಗಳನ್ನ ಪುನಃ ಆರಂಭಿಸಿತು. ಆದರೆ, ಕೊರೊನಾ ಭೀತಿಯಿಂದಾಗಿ ನಿರೀಕ್ಷೆಯಂತೆ ಮದ್ಯ ಮಾರಾಟವಾಗುತ್ತಿಲ್ಲ. ಯಾಕೆಂದ್ರೆ, ರಾಯಚೂರು ಜಿಲ್ಲೆಯೊಂದರಲ್ಲಿ ಕಳೆದ ವರ್ಷ ಏಪ್ರಿಲ್, ಮೇ, ಜೂನ್, ಈ ಮೂರು ತಿಂಗಳ ಅವಧಿಯಲ್ಲಿ 3,42,000 ಬಾಕ್ಸ್(ಕೇಸ್)ಗಳನ್ನ ಮಾರಾಟ ಮಾಡಲಾಗಿತ್ತು. ಆದರೆ, 2020 ಏಪ್ರಿಲ್, ಮೇ, ಜೂನ್ ಈ ಮೂರು ತಿಂಗಳ ಅವಧಿಯಲ್ಲಿ ಏಪ್ರಿಲ್ ತಿಂಗಳು ಹೊರತುಪಡಿಸಿ 2,90,000 ಕೇಸ್ಗಳು ಮಾರಾಟವಾಗಿವೆ.