ರಾಯಚೂರು:ಸಂಕ್ರಮಣ ನಂತರದಲ್ಲಿ ರಾಜ್ಯ ರಾಜಕೀಯಕ್ಕೆ ಬಿಜೆಪಿ ಹೈ ಕಮಾಂಡ್ ಭಾರಿ ಗಿಫ್ಟ್ ಕೊಡಲಿದೆ ಎನ್ನುವ ಮೂಲಕ ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ್ ಅನ್ವರಿ ಅಚ್ಚರಿ ಸಂಗತಿ ಬಿಚ್ಚಿಟ್ಟಿದ್ದಾರೆ.
ಸಂಕ್ರಮಣ ನಂತರ ರಾಜ್ಯಕ್ಕೆ ಬಿಜೆಪಿ ಹೈಕಮಾಂಡ್ ಭಾರಿ ಗಿಫ್ಟ್ ನೀಡಲಿದೆ: ಬಸವರಾಜ ಪಾಟೀಲ ಅನ್ವರಿ
ಬಿಜೆಪಿ ಪಕ್ಷದಲ್ಲಿ ಎಲ್ಲವು ಸರಿ ಇಲ್ಲ. ಅನೇಕ ಗೊಂದಲಗಳ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಅಥವ ಪುನರ್ ರಚನೆ ನಡೆಯಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಸವರಾಜ ಪಾಟೀಲ ಅನ್ವರಿ ಹೇಳಿದ್ದಾರೆ.
ಬಸವರಾಜ ಪಾಟೀಲ ಆನ್ವರಿ
ಶನಿವಾರ ಈಟಿವಿ ಭಾರತ್ಗೆ ಮಾಹಿತಿ ನೀಡಿದ ಅವರು, ಬಿಜೆಪಿ ಪಕ್ಷದಲ್ಲಿ ಎಲ್ಲವು ಸರಿ ಇಲ್ಲ. ಅನೇಕ ಗೊಂದಲಗಳ ಮಧ್ಯೆ ಸಚಿವ ಸಂಪುಟ ವಿಸ್ತರಣೆ ಅಥವ ಪುನರ್ ರಚನೆ ನಡೆಯಲಿದೆ ಎಂದರು.
ಈ ಮಧ್ಯೆ ಮುಖ್ಯಮಂತ್ರಿ ಬದಲಾವಣೆ ನಡೆದರು ಅಚ್ಚರಿ ಪಡಬೇಕಿಲ್ಲ. ಹೀಗೆ ಹೇಳುತ್ತಿರುವುದಕ್ಕೆ ಅನ್ವರಿ ಬಿಜೆಪಿ ತೊರೆಯುತ್ತಾರೆ ಎಂಬ ಸಂಶಯ ಬೇಡ. ಹಿರಿಯ ಮುಖಂಡನಾಗಿ ವಾಸ್ತವ ಸಂಗತಿ ಬಹಿರಂಗ ಪಡಿಸಿರುವೆ ಎಂದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡರು.
Last Updated : Dec 26, 2020, 8:16 PM IST