ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕೊಲ್ಲೂರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಶ್ರೀ ಮಹಾಲಕ್ಷ್ಮಿ ದೇವಾಲಯಕ್ಕೆ ನಟಿ ಪ್ರೇಮ ತಮ್ಮ ಕುಟುಂದೊಂದಿಗೆ ಭೇಟಿ ನೀಡಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಯಚೂರಿನ ಶ್ರೀ ಮಹಾಲಕ್ಷ್ಮಿ ದೇವಿ ದರ್ಶನ ಪಡೆದ ನಟಿ ಪ್ರೇಮ ಹಾಗೂ ಕುಟುಂಬ
ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ದೇವಸ್ಥಾನಕ್ಕೆ ಬಂದಿದ್ದ ನಟಿ ಪ್ರೇಮ ಅವರಿಗೆ ರಾಯರ ದರ್ಶನ ದೊರೆಯಲಿಲ್ಲವಾದ್ದರಿಂದ ಶ್ರೀ ಮಹಾಲಕ್ಷ್ಮಿ ಹಾಗೂ ಕಲ್ಮಲ ಶ್ರೀ ಕರಿಯಪ್ಪ ತಾತಾ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪ್ರೇಮ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಆಗಮಿಸಿದ್ದರು. ಆದರೆ ಕೊರೊನಾ ಕಾರಣದಿಂದ ಮಂತ್ರಾಲಯದಲ್ಲಿ ಇನ್ನೂ ಭಕ್ತರ ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲ. ಆದ್ದರಿಂದ ಪ್ರೇಮ ನಗರ ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡು ನಗರದ ಮಹಾಲಕ್ಷ್ಮಿ ದೇವಾಲಯ ಹಾಗೂ ಶ್ರೀ ಕರಿಯಪ್ಪ ತಾತಾ ದೇವಾಲಯಕ್ಕೆ ಭೇಟಿ ನೀಡಿದ್ದರು. ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪೂಜೆ ಬಳಿಕ ದೇವಾಲಯವನ್ನು ವೀಕ್ಷಿಸಿದ ಪ್ರೇಮಾಗೆ ಅರ್ಚಕರು ದೇವಾಲಯದ ಇತಿಹಾಸವನ್ನು ತಿಳಿಸಿದರು. ನಂತರ ಕಲ್ಮಲ ಗ್ರಾಮದ ಶ್ರೀ ಕರಿಯಪ್ಪ ತಾತಾ ದೇವಾಲಯಕ್ಕೆ ಭೇಟಿ ನೀಡಿದ ಪ್ರೇಮ ಶ್ರೀ ಕರಿಯಪ್ಪ ತಾತಾ ದರ್ಶನ ಪಡೆದರು.