ರಾಯಚೂರು:ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಸನ್ನಿದಿಯಲ್ಲಿ ನಡೆಯುತ್ತಿರುವ ಗುರು ವೈಭವ ಉತ್ಸವ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಭಾಗವಹಿಸಿದರು.
ರಾಯರ 400ನೇ ಪಟ್ಟಾಭಿಷೇಕ ನಿಮಿತ್ತ ಗುರು ವೈಭವ ಉತ್ಸವ ಶ್ರೀಮಠದಲ್ಲಿ ನಡೆಯುತ್ತಿದೆ. ಇಂದು ಸಂಜೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರಿಂದ ಸನ್ಮಾನ ಸ್ವೀಕರಿಸಿದರು. ನಂತರ ಮಾತನಾಡಿ, ಶ್ರೀರಾಘವೇಂದ್ರ ಸ್ವಾಮಿ ಅನುಗ್ರಹ ಇದ್ದರೆ ಮಾತ್ರ ಇಲ್ಲಿಗೆ ಬರಲು ಸಾಧ್ಯವೆಂದ ಅವರು, ಶ್ರೀಗಳು ಮಠದ ವಿದ್ಯಾರ್ಥಿ ಪಾನಿಪೂರಿ ಬೇಕೆಂದು ಕೇಳಿದ್ದ ವೈರಲ್ ವಿಡಿಯೋ ಕುರಿತು ಮೆಲುಕು ಹಾಕಿಕೊಂಡರು.
ಮಂತ್ರಾಲಯಕ್ಕೆ ಭೇಟಿ ನೀಡಿದ ನಟ ದರ್ಶನ್ ಇದಕ್ಕೂ ಮುನ್ನ ರಾಯರ ಮೂಲ ಬೃಂದಾವನದ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದುಕೊಂಡರು. ಬಳಿಕ ಪೀಠಾಧಿಪತಿ ಸುಬುದೇಂಧ್ರ ತೀರ್ಥರನ್ನ ಭೇಟಿ ಮಾಡಿ ಕುಶಲೋಚರಿ ವಿಚಾರಿಸಿಕೊಂಡು, ಶ್ರೀಗಳಿಗೆ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು.
ಇದನ್ನು ಓದಿ:ಸಿನಿಮಾ ಚೆನ್ನಾಗಿದ್ರೆ, ಪೈರಸಿ ಆದ್ರೂ ಜನರು ಚಿತ್ರಮಂದಿರಗಳಿಗೆ ಹೋಗಿ ನೋಡ್ತಾರೆ: ದರ್ಶನ್
ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಯರ ದರ್ಶನ ಪಡೆಯುವುದು ದೊಡ್ಡ ಭಾಗ್ಯ. ಸನ್ಮಾನ ನಂತರದ್ದು. ಇದೀಗ ರಾಬರ್ಟ್ ಸಿನಿಮಾ ಯಶ್ವಸಿಯಾಗಿ ಮುನ್ನಗುತ್ತಿದ್ದು, 100 ದಿನಗಳ ಕಾಲ ಪ್ರದರ್ಶನ ಪೂರೈಸಬಹುದು, ಕಾದು ನೋಡಿ. ಸದ್ಯ ರಾಬರ್ಟ್ ನಡೆಯುತ್ತಿದೆ. ಮುಂದಿನ ಸಿನಿಮಾ ಮತ್ತು ಪ್ರಾಜೆಕ್ಟ್ ಯಾವುದು ಅಂತಾ ಗೊತ್ತಿಲ್ಲ. ಅಭಿಮಾನಿಗಳು ಸಿನಿಮಾ ನೋಡಿ ಖುಷಿಪಡುತ್ತಿದ್ದಾರೆ, ಅವರಿಗೆ ಕೃತಜ್ಞತೆ ತಿಳಿಸುತ್ತೇನೆ ಎಂದರು
ಸಿನಿಮಾ ಪೈರಾಸಿ ಮಾಡಿದ್ದರೂ, ಚಿತ್ರ ಮುನ್ನುಗುತ್ತಿದೆ. ಅವರು ಪೈರಸಿ ಮಾಡಿ, ಏನು ಸಾಧಿಸಿದ್ರು ಎನ್ನುವುದು ಅವರನ್ನೇ ಕೇಳಬೇಕು ಎಂದರು.