ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಹೊರ ವಲಯದಲ್ಲಿ ಬಣಿವೆಗಳಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ 15 ಕ್ಕೂ ಹೆಚ್ಚು ಜೋಳದ ಬಣವೆಗಳು ಸುಟ್ಟು ಹೋಗಿವೆ.
ರಾಯಚೂರು : ಆಕಸ್ಮಿಕ ಬೆಂಕಿಗೆ 15ಕ್ಕೂ ಹೆಚ್ಚು ಜೋಳದ ಬಣವೆಗಳು ಸುಟ್ಟು ಭಸ್ಮ
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕಸಬಾಲಿಂಗಸುಗೂರು ಹೊರ ವಲಯದಲ್ಲಿದ್ದ ಜೋಳದ ಬಣವೆಗಳಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ.
ಜೋಳದ ಬಣವೆ ಭಸ್ಮ
ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮಸ್ಕಿ ರಸ್ತೆಗೆ ಹೊಂದಿಕೊಂಡಿರುವ ಬಣವೆಗಳ ಸಾಲಿನಿಂದ ಹೊಗೆ ಬರುತ್ತಿತ್ತು. ಇದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ, ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಅಂದಾಜು 4 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಸಂಜೆ 4 ಗಂಟೆವರೆಗೂ ಬೆಂಕಿ ನಂದಿಸುವ ಕಾರ್ಯ ಮುಂದುವರೆದಿತ್ತು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಚಾಮರಾಜ ಪಾಟೀಲ ಭೇಟಿ ನೀಡಿ, ಪರಿಶೀಲನೆ ನಡೆಸಿದರು.