ಕರ್ನಾಟಕ

karnataka

ETV Bharat / state

ಬರ್ಬರವಾಗಿ ಕೊಚ್ಚಿ ವ್ಯಕ್ತಿಯ ಹತ್ಯೆ ಪ್ರಕರಣ; ಒಂಬತ್ತು ಜನರ ಬಂಧನ - Raichur latest news

ರಾಯಚೂರಿನಲ್ಲಿ ನಡೆದ ಕೊಲೆ ಆರೋಪಿಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯ ಶ್ಲಾಘನೀಯ. ತಂಡದ ಪ್ರತಿ ಸದಸ್ಯರಿಗೆ 10 ಸಾವಿರ ನಗದು ಬಹುಮಾನ ನೀಡುವುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ್​ ನಿಕ್ಕಂ ಘೋಷಿಸಿದ್ದಾರೆ.

9 accused arrested after murder in Raichur
ಬಂಧಿತ ಆರೋಪಿಗಳು

By

Published : Sep 5, 2020, 8:54 PM IST

Updated : Sep 5, 2020, 11:40 PM IST

ರಾಯಚೂರು:ನಗರದಲ್ಲಿ ಕೆಲ ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು

ಸೆ.1 ರಂದು ಪಾರ್​ಕೋಟ್ ಬಡಾವಣೆ ನಿವಾಸಿಯಾದ ಶೇಕ್‌ ಬಡೆಸಾಬ್ ಅಲಿಯಾಸ್ ಸಲ್ಮಾನ್ ಮಹೆಬೂಬು (28) ಎಂಬುವನ ಹತ್ಯೆ ಮಾಡಲಾಗಿತ್ತು. ಮೃತನ ಪತ್ನಿ ನೀಡಿದ ದೂರಿನ ಅನ್ವಯ ಘಟನೆ ಕುರಿತು ಸದರ್​​ಬಜಾರ್ ಠಾಣೆ ಸಿಪಿಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಮೊದಲು ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗಿರುಬಹುದೆಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಆದರೆ, ಹಣದ ವ್ಯವಹಾರ ಕೊಲೆಗೆ ಪ್ರಮುಖ ಕಾರಣ ಎಂದು ಇದೀಗ ತನಿಖೆಯಿಂದ ತಿಳಿದು ಬಂದಿದೆ.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಬ್ಬುಖಾನ್, ಸೋಹಲ್, ಇರ್ಫಾನ್, ಜಾವೀದ್, ಇಬ್ರಾಹಿಂ, ಸಮೀರ್, ಭಕ್ತಿಯಾರ್, ಹೈದರ್, ನವಾಬ್ ಇವರನ್ನು ಬಂದಿಸಲಾಗಿದ್ದು ಇವರ ವಿರುದ್ಧ ನಗರದ ಸದಾರ್​ ಬಜಾರ್ ಪೊಲೀಸ್ ಠಾಣೆಯಲ್ಲಿ ಕಲಂ 323, 302 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ. ಕೊಲೆಗೈದ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಿದ ಪೊಲೀಸ್ ತಂಡದ ಕಾರ್ಯ ಶ್ಲಾಘನೀಯವಾಗಿದ್ದು, ತಂಡದ ಪ್ರತಿ ಸದಸ್ಯರಿಗೆ 10 ಸಾವಿರ ನಗದು ಬಹುಮಾನ ನೀಡುವುದಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಘೋಷಿಸಿದ್ದಾರೆ.

Last Updated : Sep 5, 2020, 11:40 PM IST

ABOUT THE AUTHOR

...view details