ರಾಯಚೂರು :ಜಿಲ್ಲೆಯಲ್ಲಿ 40 ದಿನಗಳ ನಂತರ ಮದ್ಯದಂಗಡಿಗಳು ಆರಂಭಗೊಂಡಿವೆ. ಹಾಗಾಗಿ ಮೊದಲ ದಿನವೇ ಬರೋಬ್ಬರಿ 2.5 ಕೋಟಿ ರೂ. ಮದ್ಯ ಮಾರಾಟವಾಗಿದೆ.
ಮೊದಲ ದಿನವೇ ರಾಯಚೂರಿನಲ್ಲಿ ₹2.5 ಕೋಟಿ ಮದ್ಯ ಸೇಲ್..
ಬೆಳಗ್ಗೆ 8ರಿಂದ ಆರಂಭವಾಗುವ ಮದ್ಯದಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಓಪನ್ ಆಗಿರಲಿವೆ. ಆ ಮೇಲೆ ಮದ್ಯ ಸಿಗಲ್ಲ.
ಅಬಕಾರಿ ಅಧಿಕಾರಿ ಪ್ರಶಾಂತ್ ಕುಮಾರ ಕೆ ಅಬಕಾರಿ ಅಧಿಕಾರಿ ಪ್ರಶಾಂತ್ ಕುಮಾರ ಕೆ
ಜಿಲ್ಲೆಯಲ್ಲಿ 89 ಮದ್ಯದಂಗಡಿಗಳು, 21 ಎಂಎಸ್‌ಐಎಲ್ ಮಳಿಗೆಗಳು ಓಪನ್ ಆಗಿವೆ.
ಈ ಸಂಬಂಧ ಮಾತನಾಡಿದ ಜಿಲ್ಲಾ ಅಬಕಾರಿ ಅಧಿಕಾರಿ ಪ್ರಶಾಂತ್ ಕುಮಾರ್ ಕೆ, ಬೆಳಗ್ಗೆ 8ರಿಂದ ಆರಂಭವಾಗುವ ಮದ್ಯದಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಓಪನ್ ಆಗಿರಲಿವೆ. ಆ ಮೇಲೆ ಮದ್ಯ ಸಿಗಲ್ಲ. ಸರ್ಕಾರ ಪ್ರಸಕ್ತ ಸಾಲಿನಲ್ಲಿ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಮದ್ಯವನ್ನು ಹೊಸ ದರದೊಂದಿಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.