ರಾಯಚೂರು:ಜಿಲ್ಲೆಯಲ್ಲಿಂದು 11 ಜನರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ರಾಯಚೂರಿನಲ್ಲಿಂದು 11 ಮಂದಿಯಲ್ಲಿ ಸೋಂಕು ದೃಢ..!
ಜಿಲ್ಲೆಯಲ್ಲಿಂದು 11 ಜನರಲ್ಲಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈವರೆಗೆ ಸೋಂಕಿನಿಂದ ಗುಣಮುಖವಾದ 404 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Raichur corona case
ರಾಯಚೂರು ತಾಲೂಕಿನ 4, ಸಿಂಧನೂರು ತಾಲೂಕಿನ 5, ಮಾನ್ವಿ ತಾಲೂಕಿನ 2 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನೂ ಜಿಲ್ಲೆಯಲ್ಲಿ 102 ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ಒಪೆಕ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ 81, ಕ್ವಾರಂಟೈನ್‌ನಲ್ಲಿ 21 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈವರೆಗೆ ಸೋಂಕಿನಿಂದ ಗುಣಮುಖರಾದ 404 ಮಂದಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.