ಕರ್ನಾಟಕ

karnataka

ETV Bharat / state

ಕೃಷಿ ವಿವಿ 10ನೇ ಘಟಿಕೋತ್ಸವ... ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು

ನಗರದ ಹೊರವಲಯದಲ್ಲಿರುವ ವಿವಿ ಆವರಣದಲ್ಲಿನ ಪ್ರೇಕ್ಷಾಗೃಹದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಘಟಿಕೋತ್ಸವದಲ್ಲಿ 38 ಚಿನ್ನದ ಪದಕ, 11 ಡಾಕ್ಟರೇಟ್ ಪದವಿ, 2 ನಗದು ಬಹುಮಾನ ಪ್ರದಾನ ಮಾಡಲಾಯಿತು.

10th convocation program at raichur agriculture university
ರಾಯಚೂರು: ಕೃಷಿ ವಿವಿಯ 10ನೇ ಘಟಿಕೋತ್ಸವ...496 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

By

Published : Jan 9, 2021, 1:59 PM IST

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವ ಇಂದು ನಡೆಯುತ್ತಿದೆ. ನಗರದ ಹೊರವಲಯದಲ್ಲಿರುವ ವಿವಿ ಆವರಣದಲ್ಲಿನ ಪ್ರೇಕ್ಷಾಗೃಹದಲ್ಲಿ ಘಟಿಕೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, 38 ಚಿನ್ನದ ಪದಕ, 11 ಡಾಕ್ಟರೇಟ್ ಪದವಿ, 2 ನಗದು ಬಹುಮಾನ ಪ್ರದಾನ ಮಾಡಲಾಯಿತು.

ಕೃಷಿ ವಿವಿಯ 10ನೇ ಘಟಿಕೋತ್ಸವ

ಒಟ್ಟು 496 ವಿದ್ಯಾರ್ಥಿಗಳಿಗೆ ಇಂದು ಪದವಿ ಪ್ರದಾನ ಮಾಡಲಾಯಿತು. ಘಟಿಕೋತ್ಸವದಲ್ಲಿ ಭಾರತೀಯ ಕೃಷಿ ಅನುಸಂಧಾನ ಭವನ ಉಪನಿರ್ದೇಶಕ ಡಾ. ಆರ್.ಸಿ. ಅಗ್ರವಾಲ್ ಹಾಗೂ ಕುಲಪತಿಗಳು, ಸಿಂಡಿಕೇಟ್ ಸದಸ್ಯರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದ ಕುಲಾಧಿಪತಿ ಹಾಗೂ ರಾಜ್ಯಪಾಲರಾದ ವಜುಭಾಯಿ ವಾಲಾ, ಸಹಕುಲಾಧಿಪತಿ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ ಗೈರು ಹಾಜರಾಗಿದ್ದರು.

ಈ ಸುದ್ದಿಯನ್ನೂ ಓದಿ:ಮೂರು ಉಪ ಚುನಾವಣೆ ಅಭ್ಯರ್ಥಿ ಆಯ್ಕೆ ಸಂಬಂಧ ಕಾಂಗ್ರೆಸ್ ನಾಯಕರ ಸಭೆ ಆರಂಭ

ಇನ್ನೂ ಘಟಿಕೋತ್ಸವದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಅತಿಥಿಗಳು, ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷವಾಗಿ ಕಂಡುಬಂತು.

ABOUT THE AUTHOR

...view details