ಮೈಸೂರು:ಇಲ್ಲಿನ ಗುಂಡೂರಾವ್ ನಗರದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಗಲಾಟೆಯಲ್ಲಿ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ.
ನಂದಕಿಶೋರ್ (24) ಕೊಲೆಯಾದ ಯುವಕ. ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಎಂಟತ್ತು ಮಂದಿಯ ತಂಡವು ದಾಳಿ ಮಾಡಿದೆ. ಈ ವೇಳೆ ನಂದ ಕಿಶೋರ್ ಸಾವನ್ನಪ್ಪಿದ್ದು, ಗಾಯಗೊಂಡಿರುವ ಈತನ ಸ್ನೇಹಿತ ಸಂಜಯ್ (25)ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡೂರಾವ್ ನಗರ ಹಾಗೂ ಕನಕಗಿರಿ ಮಧ್ಯೆ ಇರುವ ಖಾಲಿ ಜಾಗದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಚಾಕುವಿನಿಂದ ಇರಿತಕ್ಕೊಳಗಾದ ನಂದ ಕಿಶೋರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಾವ ಕಾರಣಕ್ಕೆ ಗಲಾಟೆ ನಡೆದಿದೆ ಎಂಬುದು ತಿಳಿದುಬಂದಿಲ್ಲ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಮಳೆರಾಯನ ಆರ್ಭಟ : ಸಿಡಿಲು ಬಡಿದು ತಂದೆ ಸಾವು, ಮಗನಿಗೆ ಗಂಭೀರ ಗಾಯ