ಮೈಸೂರು: ಕಪಿಲಾ ನದಿಯಲ್ಲಿ ಯುವಕ ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ತಂದೆ ಪ್ರತಿಕ್ರಿಯಿಸಿ, ಇದು ಆಕಸ್ಮಿಕ ಘಟನೆಯಲ್ಲ, ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಪಿಲಾ ನದಿಯಲ್ಲಿ ಯುವಕ ಕಣ್ಮರೆ ಕೇಸ್ - ತಂದೆ ಆರೋಪವಿದು.. ನಂಜನಗೂಡು ತಾಲೂಕಿನ ಹೆಜ್ಜಿಗೆ ಗ್ರಾಮದ ಕಪಿಲಾ ನದಿಯಲ್ಲಿ ಅಹಮದ್ ಕರೀಂ ಸೇರಿ ಮೂವರು ಯುವಕರು ಈಜಲು ಹೋಗಿದ್ದರು. ಇಬ್ಬರು ಈಜಿ ದಡ ಸೇರಿದ್ದಾರೆ. ಅಬ್ದುಲ್ ಕರೀಂ ನಾಪತ್ತೆಯಾಗಿದ್ದು, ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ:ಕಪಿಲಾ ನದಿಯಲ್ಲಿ ಈಜಲು ಹೋದ ಯುವಕ ನೀರುಪಾಲು, ಇಬ್ಬರು ಪಾರು
ಯುವಕನ ತಂದೆ ಮುನಾವರ್ ಪಾಷಾ ಮಾತನಾಡಿ, ಮಗನನ್ನು ಸಮಯ ನೋಡಿ ಕೊಲೆ ಮಾಡಲಾಗಿದೆ. ಆತ ಬಟ್ಟೆ, ಚಪ್ಪಲಿ ತೆಗೆಯದೇ ನೀರಿಗೆ ಬಿದ್ದಿದ್ದಾನೆ. ಆತನ ಜೊತೆಗಿರುವವರೇ ಕೊಲೆ ಮಾಡಲು ಈ ರೀತಿ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯ ಕೇಳಲು ಹೋದರೆ ಸರ್ಕಲ್ ಇನ್ಸ್ಪೆಕ್ಟರ್ ತೆಗಳುತ್ತಾರೆ ಎಂದು ಆರೋಪಿಸಿದ್ದಾರೆ.