ಕರ್ನಾಟಕ

karnataka

ETV Bharat / state

ಯೋಗ ಅಂದ್ರೆ ಮೈಸೂರು ಅನ್ನುವಂತೆ ಆಗಬೇಕು.... ಅದು ಈ ಶಾಸಕನ ಹೆಬ್ಬಯಕೆ

ನಾಡಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಯೋಗದಸರಾ ಉಪ ಸಮಿತಿ ವತಿಯಿಂದ ಕುವೆಂಪುನಗರದ ಸೌಗಂಧಿಕ ಉದ್ಯಾನದಲ್ಲಿ ಯೋಗವಾಹಿನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಾಡಹಹಬ್ಬ ದಸರಾ ಮಹೋತ್ಸವ

By

Published : Oct 1, 2019, 2:05 PM IST

ಮೈಸೂರು: ಭಾರತದ ಭೂಪಟದಲ್ಲಿ ಮೈಸೂರನ್ನು ಯೋಗದಲ್ಲಿ ಮೊದಲ ಸ್ಥಾನಕ್ಕೆ ತರಬೇಕು, ಇದು ಸಣ್ಣ ಪ್ರಮಾಣದ ನದಿಯಾಗಿ ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಯೋಗವು ಸಾಗರವಾಗಲಿದೆ ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ನಾಡಹಹಬ್ಬ ದಸರಾ ಮಹೋತ್ಸವ

ನಾಡಹಹಬ್ಬ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಯೋಗದಸರಾ ಉಪ ಸಮಿತಿ ವತಿಯಿಂದ ಕುವೆಂಪುನಗರದ ಸೌಗಂಧಿಕ ಉದ್ಯಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಯೋಗವಾಹಿನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಮೈಸೂರು ನಗರದಲ್ಲಿ ಯೋಗದಲ್ಲಿ ಹೆಚ್ಚು ಜನ ಸೇರುವ ಮೂಲಕ ಗಿನ್ನಿಸ್ ದಾಖಲೆ ಮಾಡಲಾಗಿದೆ. ಅತಿ ಹೆಚ್ಚು ಯೋಗ ಶಿಕ್ಷಕರು ತಯಾರಾಗಿರುವ ಸ್ಥಳ ಮೈಸೂರಾಗಿದೆ. ವಿದೇಶಗಳಲ್ಲಿ ಯೋಗ ಶಿಕ್ಷಕರ ಸಮಸ್ಯೆ ಇದೆ ಅದನ್ನು ಪೂರ್ಣ ಮಾಡುವ ಸಂಕಲ್ಪ ಮಾಡಬೇಕಿದೆ‌. ಯೋಗ ಅಭ್ಯಾಸ ಮಾಡುವವರು ಮುಂದಿನ ದಿನಗಳಲ್ಲಿ ಯೋಗ ಶಿಕ್ಷಕರಾಗಿ ಹೊರಹೊಮ್ಮಿ ಯೋಗ ಶಿಕ್ಷಕರಾಗಿ ವಿದೇಶಗಳಲ್ಲೂ ಕಾರ್ಯ ನಿರ್ವಹಿಸಲು ಮುಂದಾಗಬೇಕು ಎಂದು ಅವರು ತಿಳಿಸಿದರು.

ಯೋಗಕ್ಕೆ ಸಂಬಂಧಿಸಿ ಚಾಲನ ಕ್ರಿಯೆಗಳು, ಸೂರ್ಯ ನಮಸ್ಕಾರ, ಆಸನಗಳು, ಪ್ರಾಣಯಾಮ, ಶವಾಸನ, ಧ್ಯಾನ ಹಾಗೂ ಶಾಂತಿ ಮಂತ್ರಗಳನ್ನು ಯೋಗ ಶಿಕ್ಷಕರು ಸುಮಾರು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳು ವಿದ್ಯಾರ್ಥಿಗಳು ಸೇರಿದಂತೆ ಯೋಗಾಸಕ್ತರಿಗೆ ಯೋಗದ ವಿವಿಧ ಭಂಗಿಗಳ ಅಭ್ಯಾಸವನ್ನು ನಡೆಸಿದರು.

ABOUT THE AUTHOR

...view details