ಮೈಸೂರು :ಪತಿ ಹೃದಯಾಘಾತದಿಂದ ಮೃತಪಟ್ಟ ಹಿನ್ನೆಲೆ ಮನನೊಂದ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಬಿಎಂಶ್ರೀನಗರದಲ್ಲಿ ನಡೆದಿದೆ.
ಪತಿ ಅಗಲಿಕೆಯಿಂದ ಮನನೊಂದ ನವವಿವಾಹಿತೆ ನೇಣಿಗೆ ಶರಣು.. - ಮೈಸೂರು ನವವಿವಾಹಿತೆ ನೇಣಿಗೆ ಶರಣು
ಮನನೊಂದಿದ್ದ ಹೀನಾ ಕೌಸರ್ಗೆ ಕೆಲ ಹಿರಿಯರು ಆತ್ಮಸ್ಥೈರ್ಯ ತುಂಬಿದ್ದರು. ಹೀಗಿದ್ದೂ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಮೃಟಗಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ..
ನವವಿವಾಹಿತೆ ನೇಣಿಗೆ ಶರಣು
ಹೀನಾ ಕೌಸರ್(27) ಮೃತ ದುರ್ದೈವಿ. 3 ತಿಂಗಳ ಹಿಂದೆ ನರಸಿಂಹ ಎಂಬಾತನನ್ನ ಹೀನಾಕೌಸರ್ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಬಿಎಂಶ್ರೀನಗರದಲ್ಲಿ ವಾಸವಿದ್ದರು. ಎರಡು ದಿನಗಳ ಹಿಂದೆ ಪತಿ ನರಸಿಂಹ ಹೃದಯಾಘಾತದಿಂದ ನಿಧನರಾಗಿದ್ದರು.
ಇದರಿಂದ ಮನನೊಂದಿದ್ದ ಹೀನಾ ಕೌಸರ್ಗೆ ಕೆಲ ಹಿರಿಯರು ಆತ್ಮಸ್ಥೈರ್ಯ ತುಂಬಿದ್ದರು. ಹೀಗಿದ್ದೂ ಗೃಹಿಣಿ ನೇಣಿಗೆ ಶರಣಾಗಿದ್ದಾರೆ. ಮೃಟಗಳ್ಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.