ಕರ್ನಾಟಕ

karnataka

ETV Bharat / state

ವರದಕ್ಷಿಣೆ ಕಿರುಕುಳ ಆರೋಪ : ಮೈಸೂರಿನಲ್ಲಿ ನೇಣಿಗೆ ಶರಣಾದ ಗೃಹಿಣಿ - ಮೈಸೂರು ಮಹಿಳೆ ಆತ್ಮಹತ್ಯೆ

ಮದುವೆ ಸಂದರ್ಭದಲ್ಲಿ 3 ಲಕ್ಷ ನಗದು, ಚಿನ್ನ, ಬೆಳ್ಳಿ ನೀಡಿದ್ದರೂ ಸಹ ಮತ್ತೆ ₹1 ಲಕ್ಷ ನೀಡುವಂತೆ ಕಿರಕುಳ ನೀಡುತ್ತಿದ್ದರು ಎಂದು ಆರೋಪಿಸಿ ಸೌಮ್ಯಳ ಕುಟುಂಬಸ್ಥರು ನಂಜನಗೂಡಿನ ಬಿಳಿಗೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ..

mysore
ಗೃಹಿಣಿ ಆತ್ಮಹತ್ಯೆ

By

Published : Jul 5, 2021, 1:44 PM IST

ಮೈಸೂರು: ನಿದ್ರೆ ಮಾತ್ರೆ ಸೇವಿಸಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದಿದೆ. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಮೃತಳ ಸಂಬಂಧಿಕರು ಆರೋಪ ಮಾಡಿದ್ದಾರೆ

ಸೌಮ್ಯ(26) ಎಂಬುವರು ತನ್ನ ತವರು ಮನೆಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 3 ವರ್ಷದ ಹಿಂದೆ ಮೈಸೂರಿನ ಆಲನಹಳ್ಳಿ ಗ್ರಾಮದ ನಿವಾಸಿ ಗೌತಮ್ ಎಂಬಾತನ ಜೊತೆ ಸೌಮ್ಯ ವಿವಾಹವಾಗಿದ್ದರು.

ಆದರೆ, ಮದುವೆ ಬಳಿಕ ಅತ್ತೆ ಮತ್ತು ಗಂಡ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರಂತೆ. ಇವರ ಕಿರುಕುಳಕ್ಕೆ ಬೇಸತ್ತು ಕಳೆದ 6 ತಿಂಗಳಿನ ಹಿಂದೆಯೇ ತವರು ಮನೆಗೆ ಸೌಮ್ಯ ಬಂದಿದ್ದರಂತೆ. ಹೀಗಾದರೂ, ಸಹ ಗಂಡ ಫೋನ್ ಮಾಡಿ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಮದುವೆ ಸಂದರ್ಭದಲ್ಲಿ 3 ಲಕ್ಷ ನಗದು, ಚಿನ್ನ, ಬೆಳ್ಳಿ ನೀಡಿದ್ದರೂ ಸಹ ಮತ್ತೆ ₹1 ಲಕ್ಷ ನೀಡುವಂತೆ ಕಿರಕುಳ ನೀಡುತ್ತಿದ್ದರು ಎಂದು ಆರೋಪಿಸಿ ಸೌಮ್ಯಳ ಕುಟುಂಬಸ್ಥರು ನಂಜನಗೂಡಿನ ಬಿಳಿಗೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ABOUT THE AUTHOR

...view details