ಕರ್ನಾಟಕ

karnataka

ETV Bharat / state

ಕಾಡಾನೆ ದಾಳಿ... ಬಿಹಾರ ಮೂಲದ ಕೂಲಿ ಕಾರ್ಮಿಕ ಬಲಿ

ಮಾದಾಪುರ ಹೊರವಲಯದಲ್ಲಿ ಕಾಲುವೆ ನಿರ್ಮಾಣ ಕೆಲಸಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕ ಹನುಮಂತರಾಯನ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಂತದಿಂದ ಹೊಟ್ಟೆಗೆ ತಿವಿದು ಕಾಡಾನೆ ಗಾಯಗೊಳಿಸಿದ್ದು, ತೀವ್ರ ರಕ್ತಸ್ರಾವದಿಂದ ಹನುಮಂತರಾಯ ಅಸ್ವಸ್ಥರಾಗಿದ್ದರು. ಆ್ಯಂಬುಲೆನ್ಸ್ ಮೂಲಕ ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.

ಕೂಲಿ ಕಾರ್ಮಿಕ ಸಾವು

By

Published : May 4, 2019, 12:46 PM IST

ಮೈಸೂರು:ದಂತದಿಂದ ತಿವಿದು ಕೂಲಿ ಕಾರ್ಮಿಕನನ್ನು ಕಾಡಾನೆ ಬಲಿ ಪಡೆದಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಇಂದು ನಡೆದಿದೆ.

ಬಿಹಾರ ಮೂಲದ ಕೂಲಿ ಕಾರ್ಮಿಕನಾದ ಹನುಮಂತರಾಯ ಮೃತಪಟ್ಟ ವ್ಯಕ್ತಿ. ಕುಟುಂಬ ಸಮೇತ ಕೂಲಿಗಾಗಿ ಮಾದಾಪುರ ಗ್ರಾಮಕ್ಕೆ ಆಗಮಿಸಿ ಜಮೀನೊಂದರಲ್ಲಿ ಶೆಡ್ ಹಾಕಿಕೊಂಡು ವಾಸವಾಗಿದ್ದರು.

ಕಾಡಾನೆ ದಾಳಿಯಿಂದ ಕೂಲಿ ಕಾರ್ಮಿಕ ಸಾವು

ಮಾದಾಪುರ ಹೊರವಲಯದಲ್ಲಿ ಕಾಲುವೆ ನಿರ್ಮಾಣ ಕೆಲಸಕ್ಕೆ ಆಗಮಿಸಿದ್ದ ಕೂಲಿ ಕಾರ್ಮಿಕ ಹನುಮಂತರಾಯನ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಂತದಿಂದ ಹೊಟ್ಟೆಗೆ ತಿವಿದು ಕಾಡಾನೆ ಗಾಯಗೊಳಿಸಿದ್ದು, ತೀವ್ರ ರಕ್ತಸ್ರಾವದಿಂದ ಹನುಮಂತರಾಯ ಅಸ್ವಸ್ಥರಾಗಿದ್ದಾರೆ. ಆ್ಯಂಬುಲೆನ್ಸ್ ಮೂಲಕ ಗಾಯಾಳುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ.

ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯಪುರ ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳಿಂದ ಇಂತಹ ಅನಾಹುತ ನಡೆದಿದೆ ಎನ್ನಲಾಗುತ್ತಿದೆ.

ABOUT THE AUTHOR

...view details