ಮೈಸೂರು: ಬ್ಲಾಕ್ ಫಂಗಸ್ ಹೇಗೆ ಬರುತ್ತದೆ, ಈ ರೋಗದ ಅಪಾಯವೇನು, ಚಿಕಿತ್ಸಾ ವಿಧಾನ ಹೇಗೆ ಇದನ್ನು ತಡೆಯಬಹುದಾದ ಕ್ರಮಗಳ ಬಗ್ಗೆ ಜೆಎಸ್ಎಸ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಮುಖ್ಯಸ್ಥ ಡಾ.ಸುರೇಶ್ ನೀಡಿರುವ ಸಂದರ್ಶನ ಇಲ್ಲಿದೆ.
ಬ್ಲಾಕ್ ಫಂಗಸ್ ಬಗ್ಗೆ ಡಾಕ್ಟರ್ ಸಲಹೆ ಏನು?: ಸಂದರ್ಶನ
ಹೆಚ್ಚಿನ ಸ್ಟೆರಾಯ್ಡ್ ಬಳಕೆಯಿಂದ ಸಹ ಬ್ಲಾಕ್ ಫಂಗಸ್ ಬರುತ್ತದೆ. ಇದರಿಂದ ಶ್ವಾಸಕೋಶ, ಕಣ್ಣು, ಕಿವಿಗಳಿಗೆ ನೇರ ಪರಿಣಾಮ ಬೀರುತ್ತದೆ. ಇನ್ನು ಕೋವಿಡ್ ರೋಗಿಗಳಿಗೆ ಬ್ಲಾಕ್ ಫಂಗಸ್ಗೆ ಯಾವ ರೀತಿ ಸಂಬಂಧ ಎಂಬುವ ಬಗ್ಗೆಯೂ ಡಾ.ಸುರೇಶ್ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಂದರ್ಶನದಲ್ಲಿ ಅವರು ಮಾತನಾಡಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸ್ಟೆರಾಯ್ಡ್ ಪ್ರಮಾಣ ಹೆಚ್ಚಿಸುತ್ತಾ ಹೋದಾಗ ಅದು ಬ್ಲಾಕ್ ಫಂಗಸ್ ಆಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಕೋವಿಡ್ ಹಾಗೂ ಡಯಾಬಿಟಿಸ್ ರೋಗಿಗಳು ಬ್ಲಾಕ್ ಫಂಗಸ್ಗೆ ಬೇಗ ತುತ್ತಾಗುತ್ತಾರೆ. ಜೆಎಸ್ಎಸ್ನಲ್ಲಿ ಇದೇ ರೀತಿಯ 2 ಪ್ರಕರಣಗಳು ಕಂಡು ಬಂದಿದ್ದು ಇದನ್ನು ತಡೆಯಲು ವೆಂಟಿಲೇಟರ್ಗಳಿಗೆ ಸ್ಟರೈಲ್ ವಾಟರ್ ಬಳಸಿ ಅಗತ್ಯವಿದ್ದರೆ ಮಾತ್ರ ಸ್ಟೆರಾಯ್ಡ್ ಬಳಸುತ್ತೇವೆ ಎಂದು ತಿಳಿಸಿದರು.