ಕರ್ನಾಟಕ

karnataka

ETV Bharat / state

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಸಾವನ್ನಪ್ಪಿದ್ದ 'ವೇದವತಿ' - Sri Chamarajendra Zoo

ಈ ಆನೆ ಮರಿ ಹುಟ್ಟಿ 15 ದಿನಗಳಾದ ನಂತರ ಬಿಳಿಗಿರಿರಂಗನ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಮೈಸೂರು ಮೃಗಾಲಯಕ್ಕೆ ಆನೆ ಮರಿ ಪೋಷಣೆ ಮಾಡುವಂತೆ ಒಪ್ಪಿಸಿದ್ದರು..

ಸಾವನ್ನಪ್ಪಿದ್ದ 'ವೇದವತಿ'
ಸಾವನ್ನಪ್ಪಿದ್ದ 'ವೇದವತಿ'

By

Published : Dec 14, 2020, 10:33 AM IST

ಮೈಸೂರು: ಬಿಳಿಗಿರಿ ರಂಗನ ಬೆಟ್ಟದಲ್ಲಿ ತಾಯಿಯಿಂದ ಬೇರ್ಪಟ್ಟು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜುಲೈ ತಿಂಗಳಿನಿಂದ ಆಶ್ರಯ ಪಡೆದಿದ್ದ 'ವೇದವತಿ' ಆನೆ ಮರಿ ನಿನ್ನೆ ಅನಾರೋಗ್ಯದಿಂದ ಮೃತಪಟ್ಟಿದೆ.

ಈ ಆನೆ ಮರಿ ಹುಟ್ಟಿ 15 ದಿನಗಳಾದ ನಂತರ ಬಿಳಿಗಿರಿರಂಗನ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಮೈಸೂರು ಮೃಗಾಲಯಕ್ಕೆ ಆನೆ ಮರಿ ಪೋಷಣೆ ಮಾಡುವಂತೆ ಒಪ್ಪಿಸಿದ್ದರು.

ಮರಿ ಆನೆಗೆ 'ವೇದವತಿ' ಎಂದು ನಾಮಕರಣ ಮಾಡಿ‌ ಮೃಗಾಲಯದ ಸಿಬ್ಬಂದಿ ಸೋಮು ಎಂಬುವರು ಆರೈಕೆ ಮಾಡುತ್ತಿದ್ದರು. ಆದರೆ, ಸೋಂಕು ತಗುಲಿದ ಹಿನ್ನೆಲೆ ಚೇತರಿಸಿಕೊಳ್ಳಲು ಆಗದೆ ಆನೆ ಮರಿ ವೇದವತಿ ಮೃತಪಟ್ಟಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details