ಮೈಸೂರು:ನಾಡಿನ ಅಧಿದೇವತೆಚಾಮುಂಡಿ ದೇವಿಯ ವರ್ಧಂತಿಯಂದು ನಾಡಿನ ಜನತೆಗೆ ಒಳ್ಳೆಯದಾಗಲೆಂದು ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ರು.
ನಾಡದೇವತೆಯ ವರ್ಧಂತ್ಯುತ್ಸವ ವೈಭವ: ಜನತೆಗೆ ಯದುವೀರ ಒಡೆಯರ್ ಶುಭಾಶಯ
ನಾಡಿನ ಅಧಿದೇವತೆ ಚಾಮುಂಡಿ ದೇವಿ ಸನ್ನಿಧಿಯಲ್ಲಿ ವರ್ಧಂತಿ ಆಚರಿಸಲಾಗಿದ್ದು, ಮೈಸೂರು ರಾಜವಂಶಸ್ಥ ಯದುವೀರ ಒಡೆಯರ್ ಎಲ್ಲರಿಗೂ ವರ್ಧಂತಿ ಶುಭಾಶಯ ತಿಳಿಸಿದರು.
ನಾಡದೇವತೆ ಚಾಮುಂಡಿ ಸನ್ನಿಧಿಯಲ್ಲಿ ವೈಭವದ ವರ್ಧಂತಿ ಸಂಭ್ರಮ
ಪ್ರತಿ ವರ್ಷದ ಆಷಾಢ ಮಾಸದ ರೇವತಿ ನಕ್ಷತ್ರದಲ್ಲಿ ಅಮ್ಮನವರ ವರ್ಧಂತಿ ನಡೆಯುತ್ತದೆ. ಇದೇ ದಿನ ಹಿಂದಿನ ಮಹಾರಾಜರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಸ್ಥಾಪನೆ ಮಾಡಿದರು. ಆ ದಿನ ಕೃಷ್ಣ ಪಕ್ಷ ಸಪ್ತಮಿ ರೇವತಿ ನಕ್ಷತ್ರ ಬರುವುದರಿಂದ ಇದೇ ದಿನ ವರ್ಧಂತಿಯನ್ನು ಆಚರಿಸಿಕೊಂಡು ಬಂದಿದ್ದೇವೆ. ಅದರಂತೆ ಈ ವರ್ಷವು ಅಮ್ಮನವರ ವರ್ಧಂತಿಯನ್ನು ಆಚರಿಸುತ್ತಿದ್ದು ನಾಡಿನ ಜನತೆಯ ಆರೋಗ್ಯ ವೃದ್ಧಿಯಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳುತ್ತಾ ಶುಭಾಶಯ ತಿಳಿಸಿದ್ರು.