ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರದಲ್ಲಿ ಹೊಂದಾಣಿಕೆ ಕಾಣಿಸ್ತಿಲ್ಲ: ವಿ.ಶ್ರೀನಿವಾಸ್ ಪ್ರಸಾದ್ - ಪ್ರತಾಪ ಸಿಂಹ

ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಿದೆ. ಆದರೆ, ಎಲ್ಲೂ ಹೊಂದಾಣಿಕೆ ಅನ್ನೋದೇ ಕಾಣಿಸ್ತಿಲ್ಲ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳುವ ತಂತ್ರ ಮಾಡುತ್ತಿದ್ದಾರೆ. ತುಮಕೂರಿನಲ್ಲಿ ದೇವೇಗೌಡರನ್ನ ಸೋಲಿಸಲು ತಂತ್ರ ರೂಪಿಸಿ ಜೆಡಿಎಸ್ ಸೋಲಿಸಲು ಸಿದ್ದು ಹೊರಟಿದ್ದಾರೆ ಎಂದು ವಿ.ಶ್ರೀನಿವಾಸ್ ಪ್ರಸಾದ್ ಆರೋಪಿಸಿದರು.

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್

By

Published : Apr 7, 2019, 9:06 PM IST

ಮೈಸೂರು: ಹೆಚ್‌.ಡಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಇಬ್ಬರೂ ಹಾವು-ಮುಂಗುಸಿ ಇದ್ದಂತೆ. ಹಾವಿನ ದ್ವೇಷದಂತೆ ಸಿದ್ದರಾಮಯ್ಯ ಈ ಚುನಾವಣೆ ಮೂಲಕ ಸೇಡನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಶಾಸಕ ಶ್ರೀರಾಮುಲು ತಿಳಿಸಿದರು.

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಸೋಲಿನ ಸೇಡು ತೀರಿಸಿಕೊಳ್ಳಲು ಸಿದ್ದರಾಮಯ್ಯಗೆ ಅವಕಾಶ ಸಿಕ್ಕಿದೆ. ಈ ಚುನಾವಣೆ ಅವಕಾಶವನ್ನು ಸಿದ್ದರಾಮಯ್ಯ ಬಳಸಿಕೊಳ್ಳುತ್ತಿದ್ದಾರೆ. ದೇವೇಗೌಡರನ್ನೇ ಸೋಲಿಸುವ ಪ್ಲಾನ್ ಮಾಡಿದ್ದಾರೆ. ಹಾವಿನ ದ್ವೇಷದಂತೆ ಸಿದ್ದರಾಮಯ್ಯ ಈ ಚುನಾವಣೆ ಮೂಲಕ ಸೇಡನ್ನು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದರು. ಜಿ.ಟಿ.ದೇವೆಗೌಡರು ಈಗಾಗಲೇ ತಿಳಿಸಿದ್ದಾರೆ, ಮೈತ್ರಿ ಅಭ್ಯರ್ಥಿ ಸೋತರೆ ಜವಾಬ್ದಾರಿ ನಾನಲ್ಲ ಅಂತಾ. ಇಲ್ಲೇ ತಿಳಿಯುತ್ತೆ ಮೈತ್ರಿಯಲ್ಲಿ ಸಮನ್ವಯತೆ ಇಲ್ಲ ಎಂಬುದು. ಈ ಚುನಾವಣೆ ಮುಗಿಯಬೇಕಷ್ಟೆ ಆ ಮೇಲೆ ಸರ್ಕಾರ ಪತನವಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಸಂವಿಧಾನ ಬದಲಾವಣೆ ಮಾಡೋದು, ಮಗ್ಗಿ ಪುಸ್ತಕ, ಪಠ್ಯ ಪುಸ್ತಕ ಅಲ್ಲ. ಸಂವಿಧಾನದ ಬಗ್ಗೆ ಮಾತನಾಡುವಾಗ ಯಾರೇ ಆಗಲಿ ಎಚ್ಚರಿಕೆಯಿಂದ ಮಾತನಾಡಬೇಕು. ಲಾಯರ್ ಆಗಿರುವ ಸಿದ್ದರಾಮಯ್ಯ ಸಂವಿಧಾನ ತಿದ್ದುಪಡಿ ಕುರಿತಾದ ತೀರ್ಪುಗಳನ್ನ ಸರಿಯಾಗಿ ಓದಿಕೊಳ್ಳಲಿ. ಸಂವಿಧಾನದ ಮೂಲ ಆಶಯವನ್ನ ಬದಲಾವಣೆ ಮಾಡಲು ಲೋಕಸಭೆಗೂ ಅಧಿಕಾರ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅಷ್ಟು ಸುಲಭವಾಗಿ ಸಂವಿಧಾನ ಬದಲಾವಣೆ ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಿದೆ. ಆದರೆ, ಎಲ್ಲೂ ಹೊಂದಾಣಿಕೆ ಅನ್ನೋದೇ ಕಾಣಿಸ್ತಿಲ್ಲ. ಸಿದ್ದರಾಮಯ್ಯ ಸೇಡು ತೀರಿಸಿಕೊಳ್ಳುವ ತಂತ್ರ ಮಾಡುತ್ತಿದ್ದಾರೆ. ತುಮಕೂರಿನಲ್ಲಿ ದೇವೇಗೌಡರನ್ನ ಸೋಲಿಸಲು ತಂತ್ರ ರೂಪಿಸಿದ್ದಾರೆ. ಜೆಡಿಎಸ್ ಸೋಲಿಸಲು ಸಿದ್ದು ಹೊರಟಿದ್ದಾರೆ. ಈ ಎರಡು ಪಕ್ಷಗಳಲ್ಲೂ ಒಗ್ಗಟ್ಟಿಲ್ಲ. ಸಿದ್ದರಾಮಯ್ಯಗೆ ಅಧಿಕಾರ ಕಳೆದುಕೊಂಡು ಮತಿಭ್ರಮಣೆಯಾಗಿದೆ ಎಂದರು.

ABOUT THE AUTHOR

...view details