ಮೈಸೂರು:ಸ್ಟಾರ್ಗಳು ಸಿನಿಮಾದಲ್ಲಿ ಮಾತ್ರ. ನಮಗೆ ಜನರೇ ಸ್ಟಾರ್ಗಳು ಎಂದು ನಟ ಹಾಗೂ ಪ್ರಜಾಕೀಯ ಪಕ್ಷದ ಮುಖ್ಯಸ್ಥ ಉಪೇಂದ್ರ ಹೇಳಿದರು.
ನಗರದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಪರವಾಗಿ ಯಾವುದೇ ಸ್ಟಾರ್ಗಳು ಪ್ರಚಾರ ನಡೆಸುವುದಿಲ್ಲ. ಸಿನಿಮಾದಲ್ಲಿ ಮಾತ್ರಸ್ಟಾರ್ಗಳು. ನಮಗೆ ಸುಮಲತಾ ಅಥವಾ ಪ್ರಕಾಶ್ ರೈ ರೀತಿಯಲ್ಲಿ ಸ್ಟಾರ್ ಪ್ರಚಾರಕರು ಬೇಕಿಲ್ಲ, ನಮ್ಮ ಪಕ್ಷದಲ್ಲಿ ಪ್ರಜೆಗಳೇ ಸ್ಟಾರ್ಗಳು. ಮಾಧ್ಯಮದವರ ಮೂಲಕ ನಮ್ಮ ವಿಚಾರಗಳನ್ನು ಜನರಿಗೆ ತಲುಪಲು ಹೊರಟಿದ್ದೇವೆ ಹೊರೆತು ಯಾವುದೇ ಜಾಥಾ ಮತ್ತು ಸಮಾವೇಶಗಳಿಂದಲ್ಲ ಎಂದು ಹೇಳಿದರು.
ಜಾತಿಗಳು ಉಳಿದಿರುವುದು ರಾಜಕೀಯ ಪಕ್ಷಗಳಿಂದ. ಆದ್ದರಿಂದ ಈ ಕ್ಷೇತ್ರದಲ್ಲಿ ಬದಲಾವಣೆ ತರಬೇಕು. ಇದಕ್ಕಾಗಿ ಪಾಸಿಟಿವ್ ಥಿಂಕಿಂಗ್ ಇಟ್ಟಿಕೊಂಡು ಪ್ರಜಾಕೀಯ ಪಕ್ಷವನ್ನು ನಡೆಸಿಕೊಂಡು ಹೊರಟಿದ್ದೇವೆ ಎಂದರು.