ಕರ್ನಾಟಕ

karnataka

ETV Bharat / state

ಸಿಂಗಾಪುರ್​ನಿಂದ ಮೈಸೂರಿಗೆ ಆಗಮಿಸಿದ ಬಿಳಿ ಘೇಂಡಾಮೃಗಗಳು!

ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಸಿಂಗಾಪುರ ಮೃಗಾಲಯದಿಂದ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಒಂದು ಜೊತೆ ಆಫ್ರಿಕಾದ ಬಿಳಿ ಘೇಂಡಾಮೃಗಳನ್ನು ತರಲಾಗಿದೆ.

ಸಿಂಗಾಪುರ್​ನಿಂದ ಮೈಸೂರಿಗೆ ಆಗಮಿಸಿದ ಎರಡು ಬಿಳಿ ಘೇಂಡಾಮೃಗಗಳು

By

Published : Aug 15, 2019, 5:17 AM IST

ಮೈಸೂರು:ಪ್ರಾಣಿ ವಿನಿಮಯ ಕಾರ್ಯಕ್ರಮದಡಿಯಲ್ಲಿ ಸಿಂಗಾಪುರ ಮೃಗಾಲಯದಿಂದ ಮೈಸೂರಿನ ಶ್ರೀಚಾಮರಾಜೇಂದ್ರ ಮೃಗಾಲಯಕ್ಕೆ ಎರಡು ಆಫ್ರಿಕಾದ ಬಿಳಿ ಘೇಂಡಾಮೃಗಳನ್ನು ತರಲಾಗಿದೆ.

ಸಿಂಗಾಪುರ್​ನಿಂದ ಮೈಸೂರಿಗೆ ಆಗಮಿಸಿದ ಎರಡು ಬಿಳಿ ಘೇಂಡಾಮೃಗಗಳು

ಸಿಂಗಾಪುರ ಮೃಗಾಲಯದಿಂದ ವಿಮಾನ ಮಾರ್ಗದಲ್ಲಿ ಬೆಂಗಳೂರು ವಿಮಾನ ನಿಲ್ದಾಣ ತಲುಪಿದ ಒಂದು ಜೊತೆ ಆಫ್ರೀಕಾದ ಬಿಳಿ ಘೇಂಡಾಮೃಗಗಳು ಆಗಸ್ಟ್​ 12 ರಂದು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ. ಒಬಾನ್ (ಗಂಡು) ಮತ್ತು ವೀಟಾ (ಹೆಣ್ಣು) ಹೆಸರಿನ ಘೇಂಡಾ ಮೃಗಗಳು ತಮ್ಮ ಹೊಸ ನೆಲೆಗೆ ಬಂದು ಸೇರಿದ್ದು, ಪ್ರಸ್ತುತ ಅವುಗಳನ್ನು ದಿಗ್ಬಂಧನ ಆವರಣದಲ್ಲಿರಿಸಿ ನಿಗಾವಹಿಸಲಾಗಿದೆ. ಇವುಗಳನ್ನು ಮೈಸೂರು ಮೃಗಾಲಯದ ಪರಿಸರಕ್ಕೆ ಸರಾಗವಾಗಿ ಪರಿಚಯವಾಗುವಂತೆ ಮಾರ್ಗದರ್ಶನ ನೀಡಲು ಸಿಂಗಪುರ್​ ಮೃಗಾಲಯದದಲ್ಲಿ 35ಕ್ಕಿಂತ ಹೆಚ್ಚು ವರ್ಷಗಳ ಅನುಭವ ಹೊಂದಿರುವ ಮುಖ್ಯ ಪ್ರಾಣಿಪಾಲಕ ಚಿದಂಬರಂ ಮಯಶೂರಿಗೆ ಆಗಮಿಸಿದ್ದಾರೆ.

ಒಬಾನ್​ಗೆ 2 ವರ್ಷ ಹಾಗೂ ವೀಟಾ 3.9 ವರ್ಷ ವಯಸ್ಸಿನದಾಗಿದ್ದು, ಮೂರು ವರ್ಷಗಳ ಅಂತರದಲ್ಲಿ ಮೈಸೂರು ಮೃಗಾಲಯವು ಬಿಳಿ ಘೇಂಡಾಮೃಗವನ್ನು ಮತ್ತೊಮ್ಮೆ ಪ್ರದರ್ಶಿಸುವ ಅವಕಾಶವನ್ನು ಪಡದಿದೆ. ಮೃಗಾಲಯ ಪರಿಸರದಲ್ಲಿ ಘೇಂಡಾಮೃಗಗಳು 40 ವರ್ಷಗಳವರೆಗೆ ಜೀವಿಸಬಲ್ಲವು. ಗಂಡು ಮತು ಹೆಣ್ಣು ಎರಡೂ ಘೇಂಡಾಮೃಗಗಳು ಈ ಮೃಗಾಲಯ ಪರಿಸರದಲ್ಲಿ ಶೀಘ್ರದಲ್ಲಿಯೇ ಪ್ರವರ್ಧಮಾನಕ್ಕೆ ಬಂದು ಅವುಗಳ 6 ರಿಂದ 8ನೇ ವಯಸ್ಸಿನಲ್ಲಿ ತಮ್ಮ ಸಂತಾನಾಭಿವೃದ್ಧಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ.

ABOUT THE AUTHOR

...view details